ಗನ್ ಫೈರಿಂಗ್ ಸೌಂಡ್ ಬಳಸಿ ದ್ರಾಕ್ಷಿ ರಕ್ಷಣೆ: ವಾವ್.. ರೈತರ ಪ್ಲಾನ್ ಸೂಪರ್
ದ್ರಾಕ್ಷಿ ಸೀಸನ್‌ನಲ್ಲಿ ಹಕ್ಕಿ-ಪಕ್ಷಿಗಳ ಹಾವಳಿಗೆ ರೈತರು ಕಂಗಾಲಾಗಿದ್ದು, ಇದೀಗ ಗನ್ ಫೈರಿಂಗ್ ಸೌಂಡ್ ಬಳಸಿ ದ್ರಾಕ್ಷಿ ರಕ್ಷಣೆಗೆ ರೈತರು ಮುಂದಾಗಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಣ್ಣುರು ಗ್ರಾಮದ ಶಿವಾನಂದ ಕಲಬುರಗಿ ಎನ್ನವವರ ಜಮೀನಿನಲ್ಲಿ ಸೌಂಡ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ಇದರಲ್ಲಿ ಗನ್ ಫೈರಿಂಗ್ ಸೌಂಡ್ ಬಳಕೆ ಮಾಡಲಾಗಿದೆ.ಸೋಲಾರ್ ಮೂಲಕ ಸೌಂಡ್ ಸಿಸ್ಟಮ್ ವರ್ಕ್ ಆಗುತ್ತೆ. ಸೌಂಡ್‌ಗೆ ಬೆದರಿ ದ್ರಾಕ್ಷಿ ಹೊಲಗಳತ್ತ ಪಕ್ಷಿಗಳು ಸುಳಿಯಲ್ಲ. ಪ್ರತಿ ಎಕರೆಗೆ 2 ಸೋಲಾರ್ ಸೌಂಡ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ದ್ರಾಕ್ಷಿ ಕಾಯಲು ತಿಂಗಳಿಗೆ 15-20 ಸಾವಿರ ವ್ಯಯಿಸುತ್ತಿದ್ದ ರೈತರು, ಈಗ 1-2 ಸಾವಿರದಲ್ಲೇ ಸೌಂಡ್ ಸೆಕ್ಯೂರಿಟಿ ಗಾರ್ಡ್ ರೆಡಿ ಮಾಡಿದ್ದಾರೆ. ಕೇವಲ ಇವರ ಒಂದೇ ಜಮೀನಿನಲ್ಲಿ ಅಲ್ಲದೇ, ಮಣ್ಣೂರು, ಮಸೂತಿ ಹಾಗೂ ಕಾರಜೋಳ ಭಾಗದ ಹಳ್ಳಿಗಳಲ್ಲಿ ದ್ರಾಕ್ಷಿಯನ್ನು ಕಾಯಲು ಸೌಂಡ್ ಸಿಸ್ಟಮ್ ಬಳಕೆ ಮಾಡಲಾಗಿದೆ.
ಮೋದಿ ಬಂದ ಮೇಲೆ ಪದ್ಮಶ್ರೀ ಪ್ರಶಸ್ತಿ ಹಿರಿಮೆ-ಗರಿಮೆ ಹೆಚ್ಚಾಗಿದೆ: ಸಿ. ...