Asianet Suvarna News Asianet Suvarna News

ಕಾಫಿ ನಾಡು ಚಂದುಗೆ ಟಕ್ಕರ್ : ಚಂದು ಸ್ಟೈಲ್ ನಲ್ಲಿ ಬರ್ತ್ ಡೇ ವಿಶ್ ಮಾಡ್ತಿರೋ ಕಾಲೇಜು ಹುಡುಗ್ರು!

 ಗದಗ ಜಿಮ್ಸ್ ಸರ್ಕಾರಿ ನರ್ಸಿಂಗ್ ಕಾಲೇಜು   ವಿದ್ಯಾರ್ಥಿಗಳು ಕಾಫಿ ನಾಡು ಚಂದು ರೀತಿಯಲ್ಲಿ ಮಾಡಿರೋ ವಿಡಿಯೋ ಸದ್ಯ ಇಂಟರ್ ನೆಟ್ ನಲ್ಲಿ ಭಾರೀ ವೈರಲ್ ಆಗಿದೆ.

First Published Aug 23, 2022, 5:04 PM IST | Last Updated Aug 23, 2022, 5:04 PM IST

ಸೋಷಿಯಲ್ ಮೀಡಿಯಾ ಸ್ಟಾರ್ ಕಾಫಿ ನಾಡು ಚಂದು ಹೆಸರು ಬಹುತೇಕ ಜನರಿಗೆ ಪರಿಚಿತ. ಅವ್ರ ಬರ್ತ್ ಡೇ ವಿಶ್ ಮಾಡೋ ಶೈಲಿಗೆ ಅನೇಕ್ರು ಫಿದಾ ಆಗಿದಾರೆ. ಆನ್ ದಿ ಸ್ಪಾಟ್ ನಲ್ಲೇ ಹಾಡು ರೆಡಿ ಮಾಡಿ ಸೆಲ್ಫಿ ವೀಡಿಯೋ ಮೂಲಕ ಚಂದು ಬರ್ತ್ ಡೇ ವಿಶ್ ಮಾಡ್ತಾರೆ. ಯೂನಿಕ್ ಟ್ಯಾಲೆಂಟ್ ಗೆ ಫಿದಾ ಆದಿರೋ ಜನರು, ಬರ್ತ್ ಡೇ ವಿಶ್ ಹಾಡು ಮಾಡಿ ಅಂತಾ ಚಂದು ದುಂಬಾಲು ಬಿದ್ದ ಉದಾಹರಣೆನೂ ಇದೆ. ಆದ್ರೆ ಸಿಕ್ಕಾಪಟ್ಟೆ ಬ್ಯೂಸಿ ಇರೋ ಚಂದುನ ಹುಡ್ಕಿ ಹಾಡ್ ಮಾಡ್ಸೋದು ಕಷ್ಟಾ ಅಂತಾ ಅರೆತಿರೋ ಗದಗನ ಕೆಲ ಹುಡುಗ್ರು, ಚಂದು ಹಾಡನ್ನ ಕಾಪಿ ಮಾಡಿ, ತಮ್ಮ ಸ್ನೇಹಿತರಿಗೆ ವಿಶ್ ಮಾಡೋಸಕ್ಕೆ ಮುಂದಾಗಿದ್ದಾರೆ. ಸದ್ಯ ಇಂಥ ವೀಡಿಯೋ ಗಳು ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗ್ತಿವೆ.

ಗದಗ ಜಿಮ್ಸ್ ಸರ್ಕಾರಿ ನರ್ಸಿಂಗ್ ಕಾಲೇಜು ಫೈನಲ್ ಇಯರ್ ವಿದ್ಯಾರ್ಥಿಗಳು ಮಾಡಿರೋ ವಿಡಿಯೋ ಸದ್ಯ ಇಂಟರ್ ನೆಟ್ ನಲ್ಲಿ ಭಾರೀ ವೈರಲ್ ಆಗಿದೆ.. ಆನಂದ ಅಂಗಡಿ ಎಂಬಾತ ಸ್ನೇಹಿತ ಸಚಿನ್ ಅನ್ನೋರ ಬರ್ತ್ ಡೇ ವಿಶ್ ಮಾಡಿ, ಚಂದು ಸ್ಟೈಲಲ್ಲಿ ಹಾಡು ಹಾಡಿ ಇಂಟರ್ ನೆಟ್ ನಲ್ಲಿ ಹರಿ ಬಿಟ್ಟಿದ್ದಾನೆ. ಸ್ನೇಹಿತರ ಕೀಟಲೆ ಹಾಡು ಸದ್ಯ ಬಾರಿ ಸದ್ದು ಮಾಡ್ರಿದೆ. ಇಂಟರ್ ನೆಟ್ ಸೆನ್ಷೇಷನ್ ಚಂದು ನನ್ನ ಸಂಪರ್ಕ ಮಾಡೋದಕ್ಕೆ ಪ್ರಯತ್ನ ಮಾಡಿದ್ವಿ, ಆದ್ರೆ ಚಂದು ಕೈಗೆ ಸಿಕ್ತಿಲ್ಲ. ಸ್ನೇಹಿತನಿಗಾಗಿ ಚಂದು ಸ್ಟೈಲಲ್ಲೇ ವಿಡಿಯೋ ಮಾಡ್ಬೇಕು ಅಂತಾ ನಿರ್ಧರಿಸಿ ವಿಡಿಯೋ ಮಾಡಿದಿವಿ. ಸ್ನೇಹಿತ ಬಳಗದಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ ಅಂತಾರೆ, ವಿಡಿಯೋ ಮಾಡಿರೋ ಆನಂದ.

ಚಂದು ಸಿಗ್ಲಿಲ್ಲ ಅಂದ್ರೇನಂತೆ ನಾವೇ ವಿಡಿಯೋ ಮಾಡಿ ನಮ್ ಟ್ಯಾಲೆಂಟ್ ಏನು ಅಂತಾ ತೋರಿಸೋಣ ಅಂತಾ ಕಾಲೇಜು ಹುಡುಗ್ರು ಮುಂದಾಗಿದಾರೆ.. ಚಂದು ಮಾದರಿಯ ಸಾಕಷ್ಟು ವಿಡಿಯೋಗಳು ಈಗ ಇಂಟರ್ ನೆಟ್ ನಲ್ಲಿ ಸದ್ದು ಮಾಡ್ತಿವೆ.

Video Top Stories