ಮೈಸೂರು: ನೆರೆಯಿಂದ ಆಸ್ತಿ ಹೋಯ್ತು, ಆದ್ರೆ ಜಾತಿ ಹೋಗಿಲ್ಲ
ಪ್ರವಾಹ ಬಂದು ಜನರ ಬದುಕೇ ನೀರಿನಲ್ಲಿ ಕೊಚ್ಚಿ ಹೋದರೂ ಇನ್ನೂ ಜಾತಿ ಎಂಬ ಭೂತ ಮಾತ್ರ ಬಿಟ್ಟಿಲ್ಲ. ಎನ್‌ಡಿಆರ್‌ಎಫ್ ಹಾಗೂ ಇತರ ರಕ್ಷಣಾ ತಂಡಗಳು ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ ಜನ ಮಾತ್ರ ಜಾತಿ ಎಂದು ಕಿತ್ತಾಡುತ್ತಿದ್ದಾರೆ. ಎಲ್ಲವನ್ನೂ ಕಳೆದುಕೊಂಡ ಮೇಲೂ ಪರಿಹಾರ ಕೇಂದ್ರದಲ್ಲೂ ಜಾತಿ ಅಂತಿದ್ದಾರೆ ಜನ.
ಕಪಿಲಾ ನದಿ ಪ್ರವಾಹದಲ್ಲಿ ಭೊಕ್ಕಳ್ಳಿ ಗ್ರಾಮದ ಸುಮಾರು 90 ಮನೆಗಳಿಗೆ ನೀರು ನುಗ್ಗಿತ್ತು. 500 ರಷ್ಟು ಮಂದಿ ಗ್ರಾಮದ ಜನ ನಿರಾಶ್ರಿತರಾಗಿದ್ದರು. ಅವರೆಲ್ಲ ಒಂದೇ ಗ್ರಾಮದವರಾದರೂ ಎರಡು ಕಡೆಗಳಲ್ಲಿ ಆಶ್ರಯ ನೀಡಲಾಗಿದೆ. ಎರೆಡೆರಡು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ನಾಯಕ ಜನಾಂಗದ ಜನ ದಲಿತ ಜನಾಂಗದ ಜನರ ಜೊತೆ ಬೆರೆಯೋದಿಲ್ಲ ಎನ್ನುವ ಕಾರಣಕ್ಕೆಈ ವ್ಯವಸ್ಥೆ ಮಾಡಲಾಗಿದೆ.