Shivamogga: ದೇವಸ್ಥಾನ ಉಳಿಸಲು ಹೋರಾಡಿದ ನಾಗರ ಹಾವು ಕೊಂದವರ ವಿರುದ್ಧ FIR

ಶಿವಮೊಗ್ಗ (Shivamogga) ಎಪಿಎಂಸಿ ರಸ್ತೆಯಲ್ಲಿ 40 ವರ್ಷ ಇತಿಹಾಸ (History) ಹೊಂದಿರುವ ಪುರಾತನ ಆಂಜನೇಯ ಸ್ವಾಮಿ  ದೇಗುಲವೊಂದಿತ್ತು. ಶಿವಮೊಗ್ಗ ಸ್ಮಾರ್ಟ್ ಸಿಟಿ (Smart City) ರಸ್ತೆ ಅಗಲೀಕರಣ ನೆಪದಲ್ಲಿ ಈ ದೇಗುಲ ತೆರವುಗೊಳಿಸಲು ಸ್ಥಳೀಯ ಆಡಳಿತ ಮುಂದಾಗಿದೆ. 

Share this Video
  • FB
  • Linkdin
  • Whatsapp

ಶಿವಮೊಗ್ಗ (ಡಿ. 11): ಎಪಿಎಂಸಿ (APMC) ರಸ್ತೆಯಲ್ಲಿ 40 ವರ್ಷ ಇತಿಹಾಸ (History) ಹೊಂದಿರುವ ಪುರಾತನ ಆಂಜನೇಯ ಸ್ವಾಮಿ ದೇಗುಲವೊಂದಿತ್ತು. ಶಿವಮೊಗ್ಗ ಸ್ಮಾರ್ಟ್ ಸಿಟಿ (Smart City)ರಸ್ತೆ ಅಗಲೀಕರಣ ನೆಪದಲ್ಲಿ ಈ ದೇಗುಲ ತೆರವುಗೊಳಿಸಲು ಸ್ಥಳೀಯ ಆಡಳಿತ ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆಸಿಬಿಯಿಂದ ದೇಗುಲ ತೆರವುಗೊಳಿಸಲು ಮುಂದಾದಾಗ ಅಚ್ಚರಿ ಎಂಬಂತೆ, ನಾಗರಹಾವೊಂದು ಅಲ್ಲಿ ಪ್ರತ್ಯಕ್ಷವಾಗಿದೆ. ಜೆಸಿಬಿ ಕೆಲಸ ಮಾಡುವಾಗ ಇದಕ್ಕೆ ಸಮ್ಮತವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದೆ. ಆದರೆ ಸಂಬಂಧಪಟ್ಟವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳದೇ ತಮ್ಮ ಕೆಲಸ ಮುಂದುವರೆಸಿದ್ದಾರೆ. ಹೀಗೆ ಕೆಲಸ ಮಾಡುತ್ತಿರುವಾಗ, ನಾಗರಹಾವು ಜೆಸಿಬಿಗೆ ಸಿಲುಕಿ ಸಾವನ್ನಪ್ಪಿತ್ತು. ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು, ಭಜರಂಗದಳ, ವಿಶ್ವ ಹಿಂದೂ ಪರಿಷತ್‌ ದವರು ಸ್ಥಳೀಯ ಆಡಳಿತದ ವಿರುದ್ಧ, ಕೆಲಸ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಸ್ತೃತವಾದ ವರದಿ ಪ್ರಸಾರ ಮಾಡಿತ್ತು. 

Shivamogga : ಆಂಜನೇಯ ಗುಡಿ ತೆರವುಗೊಳಿಸದಂತೆ ಹೋರಾಡಿ, ಪ್ರಾಣ ತೊರೆದ ನೈಜ ನಾಗರ

ಶಿವಮೊಗ್ಗ ಸ್ಮಾರ್ಟ್‌ಸಿಟಿ ಇಂಜಿನಿಯರ್‌ ಕೆ.ವಿ.ವಿಜಯಕುಮಾರ್, ರಾಜ ಕುಮಾರ್ ಮತ್ತು ಜೆಸಿಬಿ ಚಾಲಕ ನಾಗಪ್ಪ ವಿರುದ್ಧ ಅರಣ್ಯ ಇಲಾಖೆ ಶಂಕರ ವಲಯ ವಿಭಾಗದಲ್ಲಿ ಎಫ್ಐಆರ್ ದಾಖಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ ನಂ .9, 31 ಮತ್ತು 51 ರ ಅಡಿಯಲ್ಲಿ ಕೇಸ್ ದಾಖಲಾಗಿದೆ.

Related Video