Mysuru Dasara: ದಸರಾ ಅಂತ್ಯ, ಲಾರಿ‌ ಹತ್ತಲು ಹಟ ಹಿಡಿದು ಕುಳಿತ 'ಶ್ರೀರಾಮ'

ದಸರಾ ಜಂಬೂ ಸವಾರಿಯಲ್ಲಿ ಭಾಗಿಯಾಗಲು ಕಾಡಿನಿಂದ ನಾಡಿಗೆ ಬಂದ ಶ್ರೀರಾಮ ಅರಮನೆಯಲ್ಲಿ ರಾಜಾತಿಥ್ಯ ಸ್ವೀಕರಿಸಿ ಕಾಡಿಗೆ ಹೋಗಲು ನಿರಾಕರಿಸಿದ ಘಟನೆ ನಡೆದಿದೆ.

Share this Video
  • FB
  • Linkdin
  • Whatsapp

ಮೈಸೂರು (ಅ.7): ದಸರಾ ಜಂಬೂ ಸವಾರಿಯಲ್ಲಿ ಭಾಗಿಯಾಗಲು ಕಾಡಿನಿಂದ ನಾಡಿಗೆ ಬಂದ ಶ್ರೀರಾಮ ಅರಮನೆಯಲ್ಲಿ ರಾಜಾತಿಥ್ಯ ಸ್ವೀಕರಿಸಿ ಕಾಡಿಗೆ ಹೋಗಲು ನಿರಾಕರಿಸಿದ ಘಟನೆ ನಡೆದಿದೆ. ಶ್ರೀರಾಮ‌ ಆನೆಯನ್ನ ಲಾರಿಗೆ ಹತ್ತಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕೊನೆಗೆ ದಸರಾ ಗಜಪಡೆಗಳ ಕ್ಯಾಪ್ಟನ್ ಅಭಿಮನ್ಯು ಬಂದು ಹಿಂದೆಯಿಂದ ತಳ್ಳಿದ್ರು ಲಾರಿ‌ ಹತ್ತಲು ಹಟ ಹಿಡಿದ ಶ್ರೀರಾಮ ಆನೆ. ಸತತ ಒಂದೂವರೆ ಗಂಟೆಗಳಿಂದ ಪ್ರಯತ್ನಿಸಿದ ಮಾವುತರು, ಕಾವಾಡಿಗಳು. ಎಷ್ಟೇ ಪ್ರಯತ್ನಿಸಿದ್ರು ಲಾರಿ ಹತ್ತಲು ನಿರಾಕರಿಸುತ್ತಿರುವ ಶ್ರೀರಾಮ. ಲಾರಿ ಹತ್ತಿಸುವ ಕಾರ್ಯಕ್ಕೆ ಅರ್ಧ ಗಂಟೆ ವಿರಾಮ ತೆಗೆದುಕೊಂಡ ಮಾವುತ, ಕಾವಾಡಿ. ಮತ್ತೆ ಮರಳಿ ಪ್ರಯತ್ನ ಆರಂಭಿಸಿದಾಗ ರೊಚ್ಚಿಗದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು. ಶ್ರೀರಾಮ ಆನೆಯನ್ನ ಲಾರಿ ಹತ್ತಿಸುವಲ್ಲಿ ಯಶಸ್ವಿ. ಹಿಂದೆಯಿಂದ ಜೋರಾಗಿ ಲಾರಿಯೊಳಗೆ ತಳ್ಳಿದ ಅಭಿಮನ್ಯು. 

Related Video