ಬೈಕಂಪಾಡಿ ತೀರದಲ್ಲಿ ಮನೆ ಸಮುದ್ರಪಾಲು, ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಬೈಕಂಪಾಡಿ ತೀರದಲ್ಲಿ ಮನೆಯೊಂದು ಸಮುದ್ರ ಪಾಲಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮೈ ಜುಂ ಎನಿಸುತ್ತದೆ.
ಬೈಕಂಪಾಡಿ ತೀರದಲ್ಲಿ ಮನೆಯೊಂದು ಸಮುದ್ರ ಪಾಲಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮೈ ಜುಂ ಎನಿಸುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಗುರುವಾರ ಮಳೆ ಇಳಿಮುಖವಾಗಿದ್ದರೂ ಅಲಲ್ಲಿ ಕಡಲಕೊರೆತ ಮುಂದುವರಿದಿದ್ದು ದಕ್ಷಿಣ ಕನ್ನಡದ ಸುರತ್ಕಲ್ ತೀರ ಪ್ರದೇಶದ ಮೀನಕಳಿಯಲ್ಲಿ ಸಮುದ್ರದ ಅಲೆ ಅಪ್ಪಳಿಸಿ ಮೀನುಗಾರಿಕಾ ರಸ್ತೆ ಸಮುದ್ರ ಪಾಲಾಗಿದೆ.
ಉಳ್ಳಾಲ, ಸೋಮೇಶ್ವರ, ಬಟ್ಟಪಾಡಿ, ಬೈಕಂಪಾಡಿ, ಸಸಿಹಿತ್ಲು ಸೇರಿದಂತೆ ಕೆಲವೆಡೆ ಕಡಲಬ್ಬರ ತುಸು ಜೋರಾಗಿಯೇ ಇದೆ. ಬೈಕಂಪಾಡಿಯ ಮೀನಕಳಿಯದಲ್ಲಿ ಕಡಲ ಭೋರ್ಗರೆತಕ್ಕೆ ಕಾಂಕ್ರಿಟ್ ರಸ್ತೆ ಮತ್ತೆ ಸಮುದ್ರ ಪಾಲಾಗಿದೆ