ಜನಪದ ಸಾಂಗ್ ಹಾಡಿ ಭಕ್ತರನ್ನ ರಂಜಿಸಿದ ಡಾ. ಶಿವುಕುಮಾರ ಸ್ವಾಮೀಜಿ

ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ 2020ರ ಕಾರ್ಯಕ್ರಮದಲ್ಲಿ ಜನಪದ ಗೀತೆ ಹಾಡಿದ ಡಾ. ಶಿವುಕುಮಾರ ಸ್ವಾಮೀಜಿ| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಜಿಲ್ಲೆಯ ಸಿದ್ದನಕೊಳ್ಳದಲ್ಲಿ ನಡೆದ ಕಾರ್ಯಕ್ರಮ| ಖ್ಯಾತ ಬಾಲಿವುಡ್ ಗಾಯಕಿ ಮಧುಶ್ರೀ ಭಟ್ಟಾಚಾರ್ಯ ಸೇರಿದಂತೆ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ|

First Published Jan 16, 2020, 11:47 AM IST | Last Updated Jan 16, 2020, 11:47 AM IST

ಹುನಗುಂದ(ಜ.16): ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳದಲ್ಲಿ ನಡೆದ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ 2020ರ ಕಾರ್ಯಕ್ರಮದಲ್ಲಿ ಡಾ. ಶಿವುಕುಮಾರ ಸ್ವಾಮೀಜಿ ಅವರ ಸಾಂಗ್‌ಗೆ ಭಕ್ತರು ಫುಲ್ ಫಿದಾ ಆಗಿದ್ದಾರೆ.  

ಹುನಗುಂದ: ಖ್ಯಾತ ಬಾಲಿವುಡ್‌ ಗಾಯಕಿ ಮಧುಶ್ರೀಗೆ ಸಿದ್ದಶ್ರೀ ಪ್ರಶಸ್ತಿ

ರಾಷ್ಟ್ರೀಯ ಉತ್ಸವದಲ್ಲಿ ವಿವಿಧ ಕಲಾವಿದರ ಹಾಡಿನ ಮಧ್ಯೆ ಡಾ. ಶಿವುಕುಮಾರ ಸ್ವಾಮೀಜಿ "ತರವಲ್ಲ ತಗಿ ನಿನ್ನ ತಂಬೂರಿ" ಎಂಬ ಜಾನಪದ ಹಾಡುವ ಮೂಲಕ ಭಕ್ತರನ್ನ ರಂಜಿಸಿದ್ದಾರೆ. ಜಾತ್ರಾ ನಿಮಿತ್ತವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವಾಮೀಜಿ ಸ್ವತಃ ಹಾಡು ಹಾಡಿದ್ದಾರೆ. ಖ್ಯಾತ ಬಾಲಿವುಡ್ ಗಾಯಕಿ ಮಧುಶ್ರೀ ಭಟ್ಟಾಚಾರ್ಯ ಸೇರಿದಂತೆ ವಿವಿಧ ಕಲಾವಿದರಿಂದ ಸಂಗೀತ  ಕಾರ್ಯಕ್ರಮ ನಡೆದಿದೆ.