Asianet Suvarna News Asianet Suvarna News

ಯಾವ ಕಾರಣಕ್ಕೂ ಮೈಮರೆಯಬೇಡಿ... ನವೆಂಬರ್‌ನಲ್ಲಿ 3ನೇ ಅಲೆ!

* ಕೊರೋನಾ ಕಡಿಮೆಯಾಗಿದೆ ಎಂದು ಮೈಮರೆಯಬೇಡಿ
* ನವೆಂಬರ್ ನಲ್ಲಿ ಮೂರನೇ ಅಲೆ ಆತಂಕ
* ಎಚ್ಚರಿಕೆ ನೀಡಿದ ಡಾ. ಸಿಎನ್ ಮಂಜುನಾಥ್

ಬೆಂಗಳೂರು(ಸೆ. 29)  ಕೊರೋನಾ (Coronavirus) ಕಡಿಮೆ ಆಗಿದೆ ಎಂದು ಮೈಮರೆಯುವ ಹಾಗಿಲ್ಲ. ಅಕ್ಟೋಬರ್ ಮತ್ತು  ನವೆಂಬರ್ ನಲ್ಲಿ ಮೂರನೇ ಅಲೆ (Covid 3rd Wave)ಕಾಡಬಹುದು ಎಂದು ಡಾ. ಸಿಎನ್ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ. ಯಾವ ಕಾರಣಕ್ಕೂ ಕೊರೋನಾ ಎಚ್ಚರಿಕೆ ಸೂತ್ರ ಮರೆಯಬೇಡಿ. ಗುಂಪು ಸೇರುವಿಕೆಯನ್ನು ಆದಷ್ಟು ಮಾಡಬೇಡಿ ಎಂದು ತಿಳಿಸಿದ್ದಾರೆ.

ಕೊರೋನಾ ನಡುವೆ ಶುರುವಾದ ಮತ್ತೊಂದು ತಲೆನೋವು

ಬಹಳಷ್ಟು ಜನ ಲಸಿಕೆ ತೆಗೆದುಕೊಂಡಿದ್ದಾರೆ. ಆಕಸ್ಮಿಕವಾಗಿ ಬಂದರೂ ಹಾನಿಯ ಪ್ರಮಾಣ ಕಡಿಮೆ ಇರಬಹುದು. ಈಗ ಕಾಡುತ್ತಿರುವ ವೈರಸ್ ಆದರೆ ನಿಯಂತ್ರಣ ಸುಲಭ.. ಆದರೆ ರೂಪಾಂತರಿ ವೈರಸ್ ಕಾಟ ಕೊಡಲು ಆರಂಭಿಸಿದರೆ ಕಷ್ಟ ಎಂದು ಎಚ್ಚರಿಕೆ ನೀಡಿದ್ದಾರೆ.