Asianet Suvarna News Asianet Suvarna News

ಮಾಲಿಕನ ನಿಧನದಿಂದ ಊಟ ಬಿಟ್ಟ ಮೂಕ ಪ್ರಾಣಿಗಳು; ದಿನ ಸಮಾಧಿ ಬಳಿ ಕಣ್ಣೀರಿಡುತ್ತವೆ!

Sep 14, 2020, 11:25 AM IST

ಬೆಳಗಾವಿ (ಸೆ. 14): ಮನುಷ್ಯರಿಗೂ ಸಾಕುಪ್ರಾಣಿಗಳಿಗೂ ಅವಿನಾಭಾವ ಸಂಬಂಧ ಇರುತ್ತವೆ. ಇಬ್ಬರಲ್ಲಿ ಒಬ್ಬರು ಇಲ್ಲ ಅಂದರೂ ಮರುಗುತ್ತೇವೆ. ಮಾಲಿಕನ ಮರಣದಿಂದ ಮೂಕ ಪ್ರಾಣಿಗಳು ಕಣ್ಣೀರಿಡುತ್ತಿವೆ. ಬೆಳಗಾವಿಯ ಶಂಕರಪ್ಪ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಾಲಿಕನ ಸಾವಿನಿಂದ ಮನೆಯಲ್ಲಿ ಸಾಕಿದ್ದ ಶ್ವಾನ, ಕೋತಿಗಳು ಕಳೆದ 8 ದಿನಗಳಿಂದ ಅನ್ನ, ನೀರು ಬಿಟ್ಟು ಕುಳಿತಿವೆ. 

ಮಾಲಿಕನ ಸಮಾಧಿ ಬಳಿ ದಿನಾ ಹೋಗಿ ಬರುತ್ತಿವೆ. ಊಟವನ್ನೇ ಮಾಡದೇ ಸುಮ್ಮನೆ ಕುಳಿತು ಬಿಡುತ್ತವೆ. ಈ ಮೂಕ ಪ್ರಾಣಿಗಳ ಪ್ರೀತಿ ನೋಡಿದರೆ ಎಂಥವರಿಗೂ ಕರುಳು ಚುರುಕ್ ಅನ್ನುತ್ತವೆ..!
 

Video Top Stories