ಲೋಟಸ್ ಆಸ್ಪತ್ರೆ ಸೀಲ್ಡ್‌ಡೌನ್: 7 ಜನ ಡಾಕ್ಟರ್ಸ್‌ಗೆ ಕ್ವಾರೆಂಟೈನ್

ಕುರುಬನಹಳ್ಳಿಯಲ್ಲಿರುವ ಲೋಟಸ್ ಆಸ್ಪತ್ರೆಯನ್ನು ಲಾಕ್ ಮಾಡಲಾಗಿದೆ. ಅಲ್ಲಿನ 7 ಜನ ವೈದ್ಯರನ್ನು ಹೋಂ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದ್ದು, ಆಸ್ಪತ್ರೆಯ ಎರಡೂ ಭಾಗಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.

Share this Video
  • FB
  • Linkdin
  • Whatsapp
ಬೆಂಗಳೂರು(ಏ.16): ಕುರುಬರ ಹಳ್ಳಿಯ ಲೋಟಸ್ ಆಸ್ಪತ್ರೆಯನ್ನು ಲಾಕ್ ಮಾಡಲಾಗಿದೆ. ತುಂಬು ಗರ್ಭಿಣಿ ಕ್ರಿಟಿಕಲ್ ಆಗಿರುವಾಗಲೇ ಆಸ್ಪತ್ರೆಗೆ ದಾಖಲಾಗಿದ್ದರು. ತಕ್ಷಣ ಆಕೆಯ ಡೆಲಿವರಿ ಮಾಡಲಾಗಿದೆ. ಆದರೆ ಸಂಜೆಯ ಹೊತ್ತಿಗೆ ಆಕೆಯ ಪತಿ ಕೊರೋನಾ ಪಾಸಿಟಿವ್ ಎಂಬುದು ತಿಳಿಯುತ್ತದೆ.

ಇದೀಗ ಆಸ್ಪತ್ರೆಗೆ ಸೀಲ್ ಮಾಡಲಾಗಿದ್ದು, 7 ಜನ ಸಿಬ್ಬಂದಿಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಆಸ್ಪತ್ರೆಯ ಎರಡೂ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಆಸ್ಪತ್ರೆ ಸಮೀಪದಲ್ಲಿ ಹಲವು ಮನೆಗಳಿದ್ದು, ಇದೀಗ ಆತಂಕ ಸೃಷ್ಟಿಯಾಗಿದೆ.

ದಿವ್ಯಾಂಗ ಮಗನ ಸಾಕಲಾರದೆ ಕಷ್ಟ ಪಡುತ್ತಿದ್ದ ತಾಯಿಗೆ ನೆರವಿನ ಮಹಾಪೂರ

ಮಹಿಳೆಯ ಪತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಹೋಂ ಕ್ವಾರೆಂಟೈನ್ ವಿಧಿಸಲಾಗಿದೆ. ಮಹಿಳೆಯಾಗಲಿ, ಆಕೆಯ ಜೊತೆ ಬಂದವರು ಯಾರೂ ಆಕೆಯ ಪತಿ ಕೊರೋನಾ ಪಾಸಿಟಿವ್ ಎಂಬ ವಿಚಾರ ತಿಳಿಸಿರಲಿಲ್ಲ.

Related Video