ದತ್ತಪೀಠದಲ್ಲಿ ವಿವಾದದ ಬಿರುಗಾಳಿ: ಉರುಸ್‌ ವಿಚಾರ ಮುಸ್ಲಿಮರ ಆಕ್ರೋಶ

ದತ್ತಪೀಠದಲ್ಲಿ ಮತ್ತೆ ವಿವಾದ ಶುರುವಾಗಿದ್ದು, ಉರುಸ್‌ ವಿಚಾರವಾಗಿ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Video
  • FB
  • Linkdin
  • Whatsapp

ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತಪೀಠದಲ್ಲಿ ವಿವಾದದ ಬಿರುಗಾಳಿ ಎಬ್ಬಿದ್ದು, ಉರುಸ್‌ ವಿಚಾರವಾಗಿ ಜಿಲ್ಲಾಡಳಿತದ ವಿರುದ್ಧ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಚ್‌ 8ರಿಂದ ಮೂರು ದಿನಗಳ ಕಾಲ ನಡೆಯುವ ಉರುಸ್‌'ನಲ್ಲಿ ವ್ಯವಸ್ಥಾಪನಾ ಸಮಿತಿಯ ಮಧ್ಯಸ್ಥಿಕೆಯನ್ನು ಒಪ್ಪಲ್ಲ. ಜಿಲ್ಲಾಡಳಿತ ಉರುಸ್‌ ಮಾಡಿದ್ರೆ ನಾವ್ಯಾರೂ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ದತ್ತಪೀಠದ ಆಡಳಿತಕ್ಕೆ ಸರ್ಕಾರವು ಸಮನ್ವಯ ಸಮಿತಿಯನ್ನು ರಚಿಸಿದೆ. ಸರ್ಕಾರದ ಸಮನ್ವಯ ಸಮಿತಿಯ ವಿರುದ್ಧವೂ ಮುಸ್ಲಿಂ ಸಮುದಾಯ ಅಸಮಧಾನ ತೋರಿದೆ. ಉರುಸ್‌'ಗೆ ಜಿಲ್ಲಾಡಳಿತ ನಿರ್ಬಂಧ ಹೇರುವಂತಿಲ್ಲ ಎಂದು ತಾಕೀತು ಮಾಡಲಾಗಿದೆ.

Related Video