
Tumakuru
ತುಮಕೂರು: ನಾಮದಚಿಲುಮೆಯಲ್ಲಿ ಅನುಮತಿ ಇಲ್ಲದೇ ಚಿತ್ರೀಕರಣ ನಡೆಸುತ್ತಿದ್ದ ಹಿನ್ನೆಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ದಾಳಿ ಮಾಡಿದ್ದಾರೆ. ಕಳೆದ ಐದು ದಿನಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ತುಮಕೂರು ಎಸಿಎಫ್ ಪವಿತ್ರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಲೈಟ್, ಅಡುಗೆ ಸಾಮಾಗ್ರಿಗಳು, ಚೇರ್‌ಗಳು, ಟಿಟಿ ವಾಹನಗಳನ್ನು ಅರಣ್ಯ ಇಲಾಖೆ ಸೀಜ್ ಮಾಡಿದೆ. ತರುಣ್ ಸುಧೀರ್ ಕ್ರಿಯೇಟಿವ್ ಹೆಸರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನಟಿ ರಕ್ಷೀತಾ ಸಹೋದರ ರಾಣ ನಟಿಸುತ್ತಿದ್ದ ಚಿತ್ರ ಎನ್ನಲಾಗಿದೆ. ಸ್ಥಳದಲ್ಲಿ ಕ್ಯಾರವಾನ್,ಕ್ಯಾಮರಾ ಲೈಟ್ ಸೇರಿದಂತೆ ಸಿನಿಮಾ ಸಂಬಂಧಿಸಿದ ಸಾಮಾಗ್ರಿಗಳು ಪತ್ತೆಯಾಗಿವೆ. ವನ್ಯ ಜೀವಿಗಳಿರುವ ಅರಣ್ಯ ಪ್ರದೇಶ ಇದಾಗಿದ್ದು, ಸುಮಾರು 50-100 ಜನರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared