ಪ್ರಧಾನಿ ಸ್ವಾಗತಕ್ಕಾಗಿ ಹಾಕಿದ್ದ ರಸ್ತೇಲಿ ಗುಂಡಿ: ಪಿಎಂ ಆಫೀಸ್ ಮಾಹಿತಿ ಕೇಳಿದ್ರೂ BBMP ಉದಾಸೀನ
BBMP News: ಕಾಮಗಾರಿ ಮುಗಿದ ಕೆಲವೇ ದಿನದಲ್ಲಿ ಅಂಬೇಡ್ಕರ್ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಭಾರೀ ಪ್ರಮಾಣದ ಗುಂಡಿ ಸೃಷ್ಟಿಯಾಗಿತ್ತು
ಬೆಂಗಳೂರು (ಅ. 21): ಜೂನ್ 20ರಂದು ಪ್ರಧಾನಿ ಮೋದಿ (PM Narendra Modi) ಬೆಂಗಳೂರಿಗೆ ಆಗಮಿಸುವ ಮುನ್ನ ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಕೊಮ್ಮಘಟ್ಟರಸ್ತೆ ಹಾಗೂ ಬೆಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ಕಾಮಗಾರಿ ಮುಗಿದ ಕೆಲವೇ ದಿನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಂಬೇಡ್ಕರ್ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಭಾರೀ ಪ್ರಮಾಣದ ಗುಂಡಿ ಸೃಷ್ಟಿಯಾಗಿತ್ತು. ಈ ಬೆನ್ನಲೇ ರಸ್ತೆ ಡಾಂಬರು ಕಿತ್ತು ಬಂದಿರುವ ಬಗ್ಗೆ ಪ್ರಧಾನಿ ಕಚೇರಿ ಕಾರಣ ಕೇಳಿತ್ತು. ಪ್ರಧಾನಿ ಕಚೇರಿ ಪ್ರಶ್ನೆ ಕೇಳಿ 4 ತಿಂಗಳೂ ಕಳೆದ್ರೂ ಬಿಬಿಎಂಪಿ (BBMP) ಉತ್ತರ ನೀಡಿಲ್ಲ. ಹೀಗಾಗಿ ಪ್ರಧಾನಿ ಕಚೇರಿ ಪತ್ರಕ್ಕೂ ಬಿಬಿಎಂಪಿಯಲ್ಲಿ ಬೆಲೆ ಇಲ್ವಾ? ಪಿಎಂ ಆಫೀಸ್ ಅಧಿಕಾರಿಗಳನ್ನೇ ಯಾಮಾರಿಸಿತಾ ಬಿಬಿಎಂಪಿ? ಎಂಬ ಅನುಮಾನ ಈಗ ಮೂಡಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
Bengaluru: ರಸ್ತೆ ದುರಸ್ತಿಗೂ ಮುನ್ನ ಚರಂಡಿ ಸ್ವಚ್ಛಗೊಳಿಸಿ: ತುಷಾರ್ ಗಿರಿನಾಥ್