ಕೊರೋನಾ ಭೀತಿ: ಮದ್ಯದ ಬಾಟಲಿ ಹಿಡಿದು ಬಬಲಾದಿ ಮಠಕ್ಕೆ ಭಕ್ತರ ದೌಡು
ರಾಜ್ಯದಲ್ಲಿ ಕೊರೋನಾ ಭೀತಿ ಮತ್ತೆ ಎದುರಾಗಿದ್ದು, ಮದ್ಯದ ಬಾಟಲಿ ಹಿಡಿದು ಕಾಲಜ್ಞಾನ ಬಬಲಾದಿ ಮಠಕ್ಕೆ ಭಕ್ತರ ದೌಡಾಯಿಸುತ್ತಿದ್ದಾರೆ.
ವಿಜಯಪುರ: ಕೊರೋನಾ 4ನೇ ಅಲೆಯ ಆರ್ಭಟ ಶುರುವಾಗಿದ್ದು, ಹೊಸ ತಳಿ ಆತಂಕದ ನಡುವೆ ಇಲ್ಲೊಂದು ಅಚ್ಚರಿ ನಡೆಯುತ್ತಿದೆ. ಕೊರೋನಾಗೆ ಹೆದರಿ ಕಾಲಜ್ಞಾನ ಮಠಕ್ಕೆ ಭಕ್ತರ ದಂಡು ಹೊರಟಿದೆ. ವಿಜಯಪುರದ ಬಬಲೇಶ್ವರ ತಾಲೂಕಿನ ಬಬಲಾದಿ ಮಠಕ್ಕೆ ಸಾರಾಯಿ, ಮದ್ಯದ ಬಾಟಲಿ ಜೊತೆಗೆ ಭಕ್ತರು ಹೋಗುತ್ತಿದ್ದಾರೆ. ಕೊರೋನಾ ಬಗ್ಗೆ ನಿಖರ ಭವಿಷ್ಯ ನುಡಿದಿದ್ದ ಬಬಲಾದಿ ಮಠ, ಕಳೆದ ಮೂರ್ನಾಲ್ಕು ದಿನದಿಂದ ಮಠಕ್ಕೆ ಭಕ್ತರ ಭೇಟಿ ನೀಡುತ್ತಿದ್ದಾರೆ. ಬಾಯಿಗೆ ಜಾಳಗಿ ಹಾಕೋ ಕಾಲ ಬರುತ್ತೆ ಎಚ್ಚರಿಕೆ ಎಂದು 2019ರ ಶಿವರಾತ್ರಿಯಂದು ಬಬಲಾದಿ ಮಠದಿಂದ ಭವಿಷ್ಯ ನುಡಿಯಲಾಗಿತ್ತು. ಅಜ್ಜನ ನಂಬಿದವರಿಗೆ ಕೊರೋನಾ ಭಾದಿಸೋಲ್ಲ ಅನ್ನುವ ನಂಬಿಕೆ. ತಾಮ್ರದ ಹಾಳೆಯಲ್ಲಿ ಭವಿಷ್ಯ ಬರೆದಿದ್ದ ಸದಾಶಿವ ಅಜ್ಜ. 300 ವರ್ಷಗಳ ಹಿಂದೆಯೆ ಬರೆದಿಟ್ಟಿದ್ದ ಪವಾಡ ಪುರುಷ ಅಜ್ಜನ ನಂಬಿದವರಿಗೆ, ಕೊರೋನಾ ಭಾದಿಸಲ್ಲ ಅನ್ನೋ ನಂಬಿಕೆ ಇದೆ.