ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!

5 ತಿಂಗಳ ನಂತರ ಪೊಲೀಸರಿಗೆ ಒಂದು ಸುಳಿವು ಸಿಕ್ಕಿತು. ತಮಿಳುನಾಡು ಮೂಲದ ಸಹೋದರರು ಬೇಕರಿ ವ್ಯಾಪಾರ ಮಾಡುತ್ತಿದ್ದರು, ಆದರೆ ಬ್ಯಾಂಕ್ ಮ್ಯಾನೇಜರ್ ಲಂಚ ಕೇಳಿದ್ದಕ್ಕೆ ದರೋಡೆಗೆ ಇಳಿದರು. ರಾಬರಿ ಮಾಡಿದವರು ಸಿಕ್ಕಿಬಿದ್ದಿದ್ದು ಹೇಗೆ?

Gowthami K  | Updated: Mar 30, 2025, 5:48 PM IST

ರಾಬರಿಯಾಗಿ 5 ತಿಂಗಳ ನಂತರ ಪೊಲೀಸರಿಗೆ ಒಂದು ಲೀಡ್​​ ಸಿಕ್ಕಿತ್ತು. ಪೊಲೀಸ್​​ ಠಾಣೆಯಿಂದ 500 ಮೀಟರ್​​ ದೂರದ ಹೊಂಡದಲ್ಲಿ ಗ್ಯಾಸ್​ ಸಿಲಿಂಡರ್​ ಪತ್ತೆಯಾಗಿತ್ತು. ಅದೇ ಸಿಲಿಂಡರ್​ನ ಮೂಲ ಹುಡುಕುತ್ತಾ ಹೊರಟ ಪೊಲೀಸರಿಗೆ ಸಿಕ್ಕಿದ್ದು ತಮಿಳುನಾಡು ಮೂಲದ ಒಂದು ಬ್ರದರ್ಸ್​​​ಗೆ . ಹಾಗಾದ್ರೆ ಆ ಅಣ್ಣತಮ್ಮಂದಿರೇ ಬ್ಯಾಂಕ್​ ರಾಬರಿ ಮಾಡಿದ್ದ. ಆ ಬ್ರದರ್ಸ್​​ ಯಾರು?

ಅವರಿಬ್ಬರು ಅಣ್ಣತಮ್ಮಂದಿರು. ತಮಿಳು ನಾಡಿನಿಂದ ಬಂದು ಬೇಕರಿ ವ್ಯಾಪಾರ ಶುರು ಮಾಡಿದ್ರು. ವ್ಯಾಪಾರ​​ ಚೆನ್ನಾಗಿ ಆಗ್ತಿದ್ದರಿಂದ ಬ್ಯುಸಿನೆಸ್​​ ದೊಡ್ಡದು ಮಾಡಲು ಪ್ಲಾನ್​ ಮಾಡಿ ಅದಕ್ಕಾಗಿ ಬ್ಯಾಂಕ್​ಗೆ ಲೋನ್​ ಅಪ್ಲೈ ಮಾಡಿದ್ರು. ಆದ್ರೆ ಬ್ಯಾಂಕ್​ ಮ್ಯಾನೇಜರ್​ ಲೋನ್​​ ಅಪ್ರೂವ್​ ಮಾಡಲು ಲಂಚ ಕೇಳಿದ್ರು. ಆದ್ರೆ ಲಂಚ ಕೊಡಲು ಇಷ್ಟ ಪಡದ ಆ ಬ್ರದರ್ಸ್​​​ ಬ್ಯಾಂಕ್​ ರಾಬರಿಗೆ ಇಳಿದುಬಿಟ್ಟರು. ಐದು ಜನರ ಗ್ಯಾಂಗ್​ ಕಟ್ಟಿಕೊಂಡು ಫೀಲ್ಡ್​​ಗೆ ಇಳಿದೇಬಿಟ್ಟರು. ರಾಬರಿ ಮೂವೀಸ್​​ಗಳನ್ನ ನೋಡಿ ಪ್ಲಾನ್​ ಎಕ್ಸಿಕ್ಯೂಟ್​​ ಮಾಡಿದ್ರು. ಆದ್ರೆ ಅವರೇ ಮಾಡಿದ ಒಂದು ತಪ್ಪು ಅವರನ್ನ ಲಾಕ್​ ಮಾಡಿತು. ಆದ್ರೆ ಕದ್ದಿದ್ದು 17 ಕೆ.ಜಿ ಆದ್ರೆ ಪೊಲೀಸರು ಮಾತ್ರ ರಿಕವರಿ ಮಾಡಿರೋದು 220 ಗ್ರಾಮ್​​​ ಅಂತಿದ್ದಾರೆ.

Read More...