Chikkamagaluru: ಇನಾಂ ದತ್ತಾತ್ರೇಯ ಪೀಠದಲ್ಲಿ 10 ದಿನಗಳ ದತ್ತಜಯಂತಿಗೆ ಚಾಲನೆ

ಕಾಫಿನಾಡ ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಯುವ ದತ್ತಜಯಂತಿಗೆ (Datta Jayanti) ಅಧಿಕೃತ ಚಾಲನೆ ದೊರೆತಿದೆ. ರಾಜ್ಯದಲ್ಲಿ ಐದು ಸಾವಿರಕ್ಕೂ ಅಧಿಕ ಭಕ್ತರು, ಚಿಕ್ಕಮಗಳೂರಿನಲ್ಲಿ (Chikkamagaluru) 200 ಕ್ಕೂ ಅಧಿಕ ದತ್ತಭಕ್ತರು ಮಾಲಾಧಾರಣೆ ಮಾಡಿದರು. 

First Published Dec 12, 2021, 4:13 PM IST | Last Updated Dec 12, 2021, 5:13 PM IST

ಚಿಕ್ಕಮಗಳೂರು (ಡಿ. 12): ಕಾಫಿನಾಡ ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಯುವ ದತ್ತಜಯಂತಿಗೆ (Datta Jayanti) ಅಧಿಕೃತ ಚಾಲನೆ ದೊರೆತಿದೆ. ರಾಜ್ಯದಲ್ಲಿ ಐದು ಸಾವಿರಕ್ಕೂ ಅಧಿಕ ಭಕ್ತರು, ಚಿಕ್ಕಮಗಳೂರಿನಲ್ಲಿ (Chikkamagaluru) 200 ಕ್ಕೂ ಅಧಿಕ ದತ್ತಭಕ್ತರು ಮಾಲಾಧಾರಣೆ ಮಾಡಿದರು. ಶಾಸಕ ಸಿ.ಟಿ.ರವಿ ಕೂಡ ಮಾಲಾಧಾರಣೆ ಕಾರ್ಯಕ್ರಮಕ್ಕೆ ಬಂದಿದ್ದು, ವೈಯಕ್ತಿಕ ಕಾರಣಗಳಿಂದ ಎರಡು ದಿನಗಳ ಬಳಿಕ ಮಾಲೆ ಹಾಕುತ್ತೇನೆ ಎಂದಿದ್ದಾರೆ. ಇಂದಿನಿಂದ 12 ದಿನಗಳ ಕಾಲ ಕಾಫಿನಾಡು ಬೂದಿಮುಚ್ಚಿದ ಕೆಂಡದಂತಿದ್ದು, ಜಿಲ್ಲಾಡಳಿತ ಕೂಡ ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದೆ. 

Flood Victims : ನಿರಾಶ್ರಿತರಿಗೆ ಮನೆಯೇನೋ ಸಿಕ್ತು, ಮೂಲ ಸೌಕರ್ಯವಿಲ್ಲದೇ ಗೋಳು ಹೇಳತೀರದು!

ಡಿಸೆಂಬರ್ 17ಕ್ಕೆ ಅನುಸೂಯ ಜಯಂತಿ, 18ರಂದು ಬೃಹತ್ ಶೋಭಾಯಾತ್ರೆ ಹಾಗೂ 19ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಸರ್ಕಾರ ಕೂಡಲೇ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಬೇಕು. ಈ ದತ್ತಜಯಂತಿಯಲ್ಲಿ ದತ್ತಪೀಠದಲ್ಲಿ ಹಿಂದೂಗಳಿಂದಲೇ ಪೂಜೆ ನಡೆಯಬೇಕು ಅನ್ನೋದು ದತ್ತಭಕ್ತರ ಆಗ್ರಹವಾಗಿದೆ. ನಮ್ಮಗಳ ಆಗ್ರಹ ಈಗಲೇ ಆಗಬೇಕೆಂದು ಇದೆ. ಚುನಾವಣೆ ಬಂದಿದ್ದರಿಂದ ತಡವಾಗಿದೆ. ಇದೇ ದತ್ತಜಯಂತಿಯಂದು ದತ್ತಪೀಠದಲ್ಲಿ ಹಿಂದೂಗಳಿಂದಲೇ ಪೂಜೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.