ಹಾಸನ: ರಸ್ತೆ ನಿರ್ಮಾಣಕ್ಕೆ ಹಾಕಿದ ಮಣ್ಣು ರೈತರ ಹೊಲಕ್ಕೆ: ನೂರಾರು ಎಕರೆ ಬೆಳೆ ನಾಶ
ಮಣ್ಣು ಸಹಿತ ನೀರಿನ ಪ್ರವಾಹಕ್ಕೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ಸರ್ವನಾಶ
ಹಾಸನ(ಆ.12): ಆಶ್ಲೇಷ ಮಳೆಗೆ ಹಾಸನ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ. ಅಡಕೆ, ಬಾಳೆ, ಕಾಫಿ ಬೆಳೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಮಣ್ಣು ಸಹಿತ ನೀರಿನ ಪ್ರವಾಹಕ್ಕೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ಸರ್ವನಾಶವಾಗಿದೆ. ಮಣ್ಣು ಪಾಲಾದ ಬೆಳೆ ಕಂಡು ಅನ್ನದಾತ ಕಂಗಾಲಾಗಿದ್ದಾನೆ. ಸಕಲೇಶಪುರ ತಾಲೂಕಿನ ದೋಣಿಗಾಲ್ ಗ್ರಾಮದ ಬಳಿ ಲೋಡ್‌ಗಟ್ಟಲೇ ಮಣ್ಣು ಕೊಚ್ಚಿ ಬಂದಿದೆ. ರಸ್ತೆ ಕಾಮಗಾರಿಗೆ ಸುರಿದ ಮಣ್ಣು ನೀರಿನಲ್ಲಿ ಕೊಚ್ಚಿಕೊಂಡು ಬಂದಿದೆ.
ತುಂಗಾಭದ್ರಾ ಡ್ಯಾಂನಿಂದ ನೀರು ಬಿಡುಗಡೆ: ಬಳ್ಳಾರಿ, ವಿಜಯನಗರದಲ್ಲಿ ಪ್ರವಾಹ ಭೀತಿ