ಗದಗದಲ್ಲಿ ಶುರುವಾಯ್ತು ಕ್ರಿಕೆಟ್‌ ಪಾಲಿಟಿಕ್ಸ್: ಮತಬೇಟೆಗೆ ಬಿಜೆಪಿ, ಕಾಂಗ್ರೆಸ್ ಸರ್ಕಸ್

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಗದಗ ಜಿಲ್ಲೆಯಲ್ಲಿ ಕ್ರಿಕೆಟ್‌ ಪಾಲಿಟಿಕ್ಸ್‌ ಶುರುವಾಗಿದೆ.
 

Share this Video
  • FB
  • Linkdin
  • Whatsapp

ಗದಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವತಿಯಿಂದ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಲಾಗಿದ್ದು, ಯುವಕರ ವೋಟ್‌ ಬ್ಯಾಂಕ್‌ಗಾಗಿ ವಿನೂತನ ಪ್ಲಾನ್‌ ಮಾಡಲಾಗಿದೆ. ಎರಡು ತಿಂಗಳಗಳ ಕಾಲ ನಡೆಯಲಿರುವ IPL ಮಾದರಿ ಪಂದ್ಯವು, ಗದಗ ಹಬ್ಬ ಹೆಸರಿನಲ್ಲಿ ನಡೆಯಲಿದೆ. ಬಿಜೆಪಿಯ GCLನಲ್ಲಿ 130ಕ್ಕೂ ಹೆಚ್ಚು ತಂಡಗಳು ಭಾಗಿಯಾಗಲಿದ್ದು, ಪ್ರಧಾನಿ ಮೋದಿ ಹೆಸರಿನಲ್ಲಿ ಟ್ರೋಫಿ ಬಹುಮಾನ ನೀಡಲಾಗುವುದು. 35 ವಾರ್ಡ್‌ಗಳು ಹಾಗೂ ಗ್ರಾಮೀಣ ಭಾಗದ ತಂಡಗಳು ಭಾಗಿಯಾಗಲಿವೆ‌. ಇತ್ತ ಹೆಚ್‌.ಕೆ ಪಾಟೀಲ್‌ ನೇತೃತ್ವದಲ್ಲಿ ಕ್ರಿಕೆಟ್‌ ಲೀಗ್‌ ಆಯೋಜನೆ ಮಾಡಲಾಗಿದ್ದು, 170 ತಂಡಗಳು ಭಾಗಿಯಾಗಲಿವೆ.

Related Video