ಗಾಂಜಾ ದಂಧೆಕೋರರಿಂದ ಸಿಪಿಐಗೆ ಹಲ್ಲೆ ಕೇಸ್: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಗಾಂಜಾ ದಂಧೆ ಕೋರರಿಂದ ಸಿಪಿಐ ಶ್ರೀಮಂತ ಇಲ್ಲಾಳ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂರು ತಿಂಗಳಿಂದ ICU ನಲ್ಲೇ ಇನ್ಸ್‌ ಪೆಕ್ಟರ್‌ ಶ್ರೀಮಂತ  ಇಲ್ಲಾಳ್‌ಗೆ ಚಿಕಿತ್ಸೆ ನಡೆದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇನ್ಸ್ ಪೆಕ್ಟರ್‌ ಇಲ್ಲಾಳ್‌ಗೆ ಚಿಕಿತ್ಸೆ ಮುಂದುವರೆದಿದೆ. ಶ್ರೀಮಂತ ಇಲ್ಲಾಳ್‌ ಮೆದುಳಿಗೆ ಗಂಭೀರ ಪ್ರಮಾಣದ ಗಾಯವಾಗಿತ್ತು. ಇಲ್ಲಿಯವರೆಗೆ ಇಲ್ಲಾಳ್‌ಗೆ ವೈದ್ಯರು ನಾಲ್ಕು ಸರ್ಜರಿ ಮಾಡಿದ್ದಾರೆ. ಮಹಾರಾಷ್ಟ್ರದ ಗಾಂಜಾ ದಂಧೆಕೋರರ ಬಂಧನದ ವೇಳೆ ಹಲ್ಲೆ ನಡೆದಿತ್ತು. ಅರೆ ಪ್ರಜ್ಞಾಸ್ಥತಿಯಲ್ಲಿರುವ ಶ್ರೀಮಂತ ಇಲ್ಲಾಳ್‌, ಕಲಬುರಗಿ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್‌ ಆಗಿದ್ದು, ತಂದೆಯ ಪರಸ್ಥಿತಿ ಕಂಡು ಮಗ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

Related Video