Cover Story Impact: ಮೈಸೂರು ವಾಣಿಜ್ಯ ತೆರಿಗೆ ಇಲಾಖೆ ಮೇಲೆ ಲೋಕಾಯುಕ್ತ ದಾಳಿ..!

ಸುವರ್ಣ ನ್ಯೂಸ್ ಕವರ್‌ ಸ್ಟೋರಿ ತಂಡದಿಂದ ವಾಣಿಜ್ಯ ಇಲಾಖೆಯ ಭ್ರಷ್ಟರ ಬೇಟೆ ಬಳಿಕ, ಭ್ರಷ್ಟ ಅಧಿಕಾರಿಗಳ ಅಮಾನತು ಆಗಿತ್ತು. ಇದೀಗ ಮತ್ತೊಂದು ಮೆಗಾ ಇಂಪ್ಯಾಕ್ಟ್‌ ನಡೆದಿದೆ.

Share this Video
  • FB
  • Linkdin
  • Whatsapp

ಮೈಸೂರು: ಮೈಸೂರು ವಾಣಿಜ್ಯ ತೆರಿಗೆ ಇಲಾಖೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ದೇವರಾಜ ಮೊಹಲ್ಲಾ ವಾಣಿಜ್ಯ ತೆರಿಗೆ ಕಚೇರಿ ಮೇಲೆ ಡಿಸೆಂಬರ್ 12ರಂದು ದಿಢೀರ್‌ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, ಹಾಜರಾತಿ ಪುಸ್ತಕ ಹಾಗೂ ಹಣಕಾಸು ರಿಜಿಸ್ಟ್ರಾರ್‌ ಸೇರಿದಂತೆ ಕೆಲ ದಾಖಲೆಗಳನ್ನು ಶೋಧ ಮಾಡಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕಳ್ಳಾಟದ ಬಗ್ಗೆ ದೂರು ಹಿನ್ನೆಲೆಯಲ್ಲಿ ವಾಣಿಜ್ಯ ಇಲಾಖೆ ಮೇಲೆ ದಾಳಿ ಮಾಡಿ, ಲೋಕಾಯುಕ್ತ ಎಸ್‌.ಪಿ ಸುರೇಶ್‌ ಬಾಬು ನೇತೃತ್ವದಲ್ಲಿ ಶೋಧ ನಡೆಸಲಾಗಿದೆ.

Related Video