ಕರಗದ ಮೇಲೂ ಕರೋನಾ ಕರಿನೆರಳು; ಉತ್ಸವ ಆಚರಣೆ ಅನುಮಾನ

ಬೆಂಗಳೂರು ಕರಗದ ಮೇಲೆ ಕರೋನಾ ಪರಿಣಾಮ/ ಕರಗ ಆಚರಣೆ ಬಗ್ಗೆ ಸಿಎಂ ಜತೆಮಾತನಾಡಿ ತೀರ್ಮಾನ/ ಕರಗ ಮಹೋತ್ಸವ ಬೆಂಗಳೂರು ಮಟ್ಟಿಗೆ ಒಂದು ದೊಡ್ಡ ಉತ್ಸವ

First Published Mar 10, 2020, 8:09 PM IST | Last Updated Mar 10, 2020, 8:26 PM IST

ಬೆಂಗಳೂರು[ಮಾ. 10]  ಬೆಂಗಳೂರು ಕರಗದ ಮೇಲೆಯೂ ಕರೋನಾ ವೖರಸ್ ಪರಿಣಾಮ ಬೀರಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿ ಕರಗ ಆಚರಣೆ ಮಾಡಬೇಕೋ? ಬೇಡವೋ? ಎಂಬುದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಕರ್ನಾಟಕದ ನಾಲ್ವರಿಗೆ ಕರೋನಾ; ದಿಟ್ಟ ಕ್ರಮಕ್ಕೆ ಮುಂದಾದ ಸರ್ಕಾರ

ಕರಗ ಉತ್ಸವ ಬೆಂಗೂಳೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡುತ್ತದೆ. ಬೆಂಗಳೂರು ಸೇರಿದಂತೆ ಸುತ್ತಲಿನ ಜನ ಕರಗಕ್ಕೆ ಭೇಟಿ ನೀಡುತ್ತಾರೆ. 

Video Top Stories