Controversial Banner: ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ಬ್ಯಾನರ್ ಪಾಲಿಟಿಕ್ಸ್

ಜಿಲ್ಲೆಯ ಹೊರ ವಲಯದ ಉಳ್ಳಾಲ ಬೈಲ್‌ನಲ್ಲಿ ವಿವಾದತ್ಮಕ ಬ್ಯಾನರ್‌ವೊಂದನ್ನು ಅಳವಡಿಸಲಾಗಿದೆ. 'ಇಂದು ಬೆಳಗ್ಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶವಿದೆ' ಎನ್ನುವ ಬರಹವಿರುವ ಬ್ಯಾನರ್‌ ಇದೀಗ ಕಿಚ್ಚು ಹೊತ್ತಿಸಿದೆ. 

Share this Video
  • FB
  • Linkdin
  • Whatsapp

ಮಂಗಳೂರು (ಜ.29): ಜಿಲ್ಲೆಯ ಹೊರ ವಲಯದ ಉಳ್ಳಾಲ ಬೈಲ್‌ನಲ್ಲಿ ವಿವಾದತ್ಮಕ ಬ್ಯಾನರ್‌ವೊಂದನ್ನು (Controversial Banner) ಅಳವಡಿಸಲಾಗಿದೆ. 'ಇಂದು ಬೆಳಗ್ಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶವಿದೆ' ಎನ್ನುವ ಬರಹವಿರುವ ಬ್ಯಾನರ್‌ ಇದೀಗ ಕಿಚ್ಚು ಹೊತ್ತಿಸಿದೆ. 'ಈ ನೆಲದ ದೈವ ದೇವರುಗಳನ್ನು ಪೂಜಿಸುವವರಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು' ಎಂದು ಅದರಲ್ಲಿ ಬರೆಯಲಾಗಿತ್ತು. ಮಾತ್ರವಲ್ಲದೇ ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ಇದೀಗ ಬ್ಯಾನರ್ ಪಾಲಿಟಿಕ್ಸ್ ಶುರುವಾಗಿದೆ. 

Sandalwood: ನಿರ್ಮಾಪಕನಿಂದ ಲವ್, ಸೆಕ್ಸ್..ದೋಖಾ, FIR ದಾಖಲು

ಕೋಮು ದ್ವೇಷ ಹರಡುವ ಬ್ಯಾನರ್ ಎಂದು ಯು.ಟಿ. ಖಾದರ್ (UT Khader) ಕೇಸ್ ದಾಖಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಬ್ಯಾನರ್ ಅಳವಡಿಕೆಯನ್ನು ದಕ್ಷಿಣ ಉಸ್ತುವಾರಿ ಸಚಿವ ಸುನೀಲ್ ಕುಮಾರ್ (Sunil Kumar) ಸಮರ್ಥಿಸಿಕೊಂಡಿದ್ದು, ಕಾರ್ಯಕರ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವೆ ಎಂದು ತಿಳಿಸಿದ್ದಾರೆ. ಬ್ಯಾನರ್ ಪ್ರಿಂಟ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಯು.ಟಿ. ಖಾದರ್ ಕಿಡಿಕಾರಿದ್ದಾರೆ.

Related Video