Asianet Suvarna News Asianet Suvarna News

ಹಳೆಯ ನಿಯಮಕ್ಕೆ ತಿಲಾಂಜಲಿ: ನೂತನ ಅಪಾರ್ಟ್ಮೆಂಟ್‌ಗೆ ಬಿಡಿಎ ಗ್ರೀನ್ ಸಿಗ್ನಲ್

ಸಾವಿರಾರು ಬಿಡಿಎ ಫ್ಲಾಟ್'ಗಳು  ಖಾಲಿ ಬಿದ್ದಿದ್ದು, ಹಳೆಯ ಫ್ಲಾಟ್ ಮಾರಾಟ ಆಗದಿದ್ರೂ ಚುನಾವಣೆ ಹೊಸ್ತಿಲಲ್ಲಿ ಬಹುಕೋಟಿ ವಸತಿ ಸಮುಚ್ಛಯ ನಿರ್ಮಾಣಕ್ಕೆ ಚಿಂತನೆ ನಡೆದಿದೆ.

ಬಿಡಿಎ ವತಿಯಿಂದ ನೂತನ ಅಪಾರ್ಟ್ಮೆಂಟ್'ಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಬರೋಬ್ಬರಿ 343 ಕೋಟಿ ರೂ.  ವೆಚ್ಚದಲ್ಲಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಕೋನದಾಸಪುರದ ಸರ್ವೆ ನಂಬರ್ 19, 20ರಲ್ಲಿ ನಿರ್ಮಾಣಕ್ಕೆ ಪ್ಲಾನ್ ನಡೆದಿದೆ. ಬಿಡಿಎ ಹೌಸಿಂಗ್ ಪ್ರಾಜೆಕ್ಟ್ ವಿಭಾಗ ಟೆಂಡರ್ ಕರೆದಿದ್ದು, 3, 4, 5 BHK ಹೊಂದಿದ 300 ಫ್ಲಾಟ್ ನಿರ್ಮಾಣಕ್ಕೆ ಬಿಡಿಎ ಅಸ್ತು ಎಂದಿದೆ.  ಶೇ.80ರಷ್ಟು ಹಳೆಯ ಪ್ಲಾಟ್ ಸೇಲ್ ಆದ ಬಳಿಕ ಹೊಸ ಯೋಜನೆಯ ಬಗ್ಗೆ ಹಿಂದಿನ ಬಿಡಿಎ ಆಯುಕ್ತ  ರಾಕೇಶ್ ಸಿಂಗ್ ಅವಧಿಯಲ್ಲಿ ನಿರ್ಣಯ ಮಾಡಲಾಗಿತ್ತು. ಆದ್ರೆ ಹಳೆ ನಿಯಮಕ್ಕೆ ತಿಲಾಂಜಲಿ ಇಟ್ಟು ಹೊಸ ಯೋಜನೆಗೆ ಪ್ಲಾನ್ ಮಾಡಲಾಗಿದೆ. ತಮಗೆ ಬೇಕಾದವರಿಗೆ ಟೆಂಡರ್ ನೀಡಲು ಪ್ಲಾನ್ ನಡೆದಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಬಿಡಿಎಗೆ ಮತ್ತೆ ಹೊಸ ಅಪಾರ್ಟ್ಮೆಂಟ್ ಬೇಕಾ? ನಿಯಮ ಮೀರಿ ನಿರ್ಮಾಣ ಏಕೆ ಎಂದು RTI ಕಾರ್ಯಕರ್ತ ಸಾಯಿದತ್ತ ಪ್ರಶ್ನೆ ಮಾಡಿದ್ದಾರೆ.