Asianet Suvarna News Asianet Suvarna News

ಕರಾವಳಿ ಭಾಗದಲ್ಲಿ ಕೆಂಗಣ್ಣು ರೋಗದ ಆತಂಕ: ಶಾಲಾ ಮಕ್ಕಳಲ್ಲಿ ಹೆಚ್ಚಿದ ಪ್ರಕರಣ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ರೋಗದ ಭೀತಿ ಎದುರಾಗಿದ್ದು,  ಶಾಲಾ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ.
 

ಮಂಗಳೂರು ಸುತ್ತಮುತ್ತ ಕೆಂಗಣ್ಣು ರೋಗದ ಆತಂಕ ಎದುರಾಗಿದ್ದು, ಶಾಲಾ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಬಜಪೆ ಕಾವೂರು, ಕೋಡಿಕಲ್‌ ಹಾಗೂ ಬೆಳ್ತಂಗಡಿ ಭಾಗದಲ್ಲಿ ಹೆಚ್ಚಿನ  ಪ್ರಕರಣಗಳು ಪತ್ತೆಯಾಗಿವೆ. ದಿನಕ್ಕೆ 60ರಿಂದ 70 ಮಕ್ಕಳಿಗೆ ಕೆಂಗಣ್ಣು ರೋಗ ವಕ್ಕರಿಸುತ್ತಿದೆ. ಕಣ್ಣಿನ ಸುತ್ತ ಊತ, ಕೆಂಪು ಮತ್ತು ಹಳದಿ ಬಣ್ಣಕ್ಕೆ ತಿರುಗಿ ರೋಗ ಉಲ್ಬಣವಾಗುತ್ತದೆ. ಮಕ್ಕಳಲ್ಲಿ ರೋಗದ ಲಕ್ಷಣ ಕಂಡು ಬಂದಲ್ಲಿ, ಶಾಲೆಗೆ ರಜೆ ಕೊಡುವಂತೆ ಸೂಚನೆ ನೀಡಲಾಗಿದ್ದು, ಮಂಗಳೂರು ಆಸ್ಪತ್ರೆ ಹಾಗೂ ಕ್ಲಿನಿಕ್‌'ಗಳು ರೋಗಿಗಳಿಂದ ಫುಲ್‌ ಭರ್ತಿಯಾಗಿವೆ.

Udupi: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬ್ಯಾಂಕ್ ಉದ್ಯೋಗಿಯ ಮೃತದೇಹ ಪತ್ತೆ

Video Top Stories