Asianet Suvarna News Asianet Suvarna News

ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಇನ್ಮುಂದೆ ಆಗದಿರಲಿ: ಬೊಮ್ಮಾಯಿಗೆ ಪಾಟೀಲ್‌ ಶುಭ ಹಾರೈಕೆ

* ಉತ್ತರ ಕರ್ನಾಟಕದ ಭಾಗದವರಿಗೆ ಅಧಿಕಾರ ದೊರಕುತ್ತಿರಲಿಲ್ಲ
* ಬೊಮ್ಮಾಯಿ ಆಡಳಿತ ಕಾಲದಲ್ಲಿ ಎಲ್ಲಾ ಒಳ್ಳೆಯದಾಗಲಿ
* ಉತ್ತರ ಕರ್ನಾಟಕದ ಭಾಗದ ಜನರ ಬೇಡಿಕೆಗಳಿಗೆ ವಿಶೇಷವಾದ ಗಮನ ಹರಿಸಬೇಕು
 

First Published Jul 29, 2021, 8:51 AM IST | Last Updated Jul 29, 2021, 8:51 AM IST

ಗದಗ(ಜು.29):  ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವುದು ಸಂತಸ ತಂದಿದೆ.  ಉತ್ತರ ಕರ್ನಾಟಕಕ್ಕೆ ಸಿಎಂ ಪದವಿ ದೊರಕಬೇಕು. ಉತ್ತರ ಕರ್ನಾಟಕದ ಭಾಗದವರಿಗೆ ಅಧಿಕಾರ ದೊರಕುತ್ತಿರಲಿಲ್ಲ. ಈ ಕಾರಣಕ್ಕೆ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ಕುಂಠಿತವಾಗಿದೆ. ಈ ಭಾಗದ ಜನರ ಭಾವನೆಗಳು ಎಲ್ಲವೂ ಘಾಸಿಕೊಂಡಿವೆ. ಬೊಮ್ಮಾಯಿ  ನಮ್ಮ ಸ್ನೇಹಿತರು ಉತ್ತಮ ಆಡಳಿತಗಾರರು, ಭಾಷಣಕಾರರು ಹೌದು. ಅವರ ಆಡಳಿತ ಕಾಲದಲ್ಲಿ ಎಲ್ಲಾ ಒಳ್ಳೆಯದಾಗಲಿ. ಉತ್ತರ ಕರ್ನಾಟಕ ಭಾಗಕ್ಕೆ ಆದ ಅನ್ಯಾಯ ಅದು ಇನ್ಮುಂದೆ ಪೂರ್ಣವಾಗಿ ಇಲ್ಲವಾಗಲಿ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಎಚ್.ಕೆ ಪಾಟೀಲ ಹೇಳಿದ್ದಾರೆ. 

ಚಲ್ತಾ ಹೇ...ನಡೆಯಲ್ಲ,  ನೂತನ ಸಿಎಂ ಬೊಮ್ಮಾಯಿ ಸಂದರ್ಶನ

ಮಹಾದಾಯಿ ನದಿ ಜೋಡಣೆ ಯೋಜನೆ, ಕೃಷ್ಣಾ ನದಿಯ ಬಹಳಷ್ಟು ಕೆಲಸವಾಗಬೇಕಿದೆ.  ಉತ್ತರ ಕರ್ನಾಟಕದ ಭಾಗದ ಜನರ ಬೇಡಿಕೆಗಳಿಗೆ ವಿಶೇಷವಾದ ಗಮನ ಹರಿಸಬೇಕು ಎಂದು ಹೇಳುವ ಮೂಲಕ ನೂತನ ಮುಖ್ಯಮಂತ್ರಿಗೆ ಎಚ್.ಕೆ ಪಾಟೀಲ್ ಶುಭ ಹಾರೈಸಿದ್ದಾರೆ.