Asianet Suvarna News Asianet Suvarna News

ಬಸವಣ್ಣನವರ ಕಾಲಿನ ಧೂಳಿಗೂ ನಾನು ಸಮವಲ್ಲ: ಸಿಎಂ ಬೊಮ್ಮಾಯಿ

ಬಸವಣ್ಣನವರಿಗೆ ನನ್ನನ್ನು ಹೋಲಿಕೆ ಮಾಡಬೇಡಿ. ಅವರ ಕಾಲಿನ ಧೂಳಿಗೂ ನಾನು ಸಮವಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
 

ವಿಜಯಪುರದ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ ಸಮಾರಂಭದ ವೇದಿಕೆಯಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಆಧುನಿಕ ಬಸವಣ್ಣ ಎಂದು ನಿರೂಪಕಿ ಬಣ್ಣಿಸಿದರು. ಈ ವೇಳೆ ಮಾತನಾಡಿದ ಸಿಎಂ, ಆಧುನಿಕ ಬಸವಣ್ಣ ಹಾಗೂ ಎರಡನೇ ಬಸವಣ್ಣ ಎನ್ನವಂತದ್ದು ಬಹಳ ದೊಡ್ಡ ತಪ್ಪು. ಬಸವಣ್ಣನವರು ದೇವ  ಮಾನವರು, ಅವರ ಕಾಲಿನ ಧೂಳಿಗೂ ನಾನು ಸಮಾನವಿಲ್ಲ ಎಂದರು. ದಯವಿಟ್ಟು ಯಾರು ನನ್ನನ್ನು ಬಸವಣ್ಣ ಎಂದು ಸಂಭೋದಿಸಬಾರದು ಎಂದು ವಿನಂತಿಸಿದರು. ನನಗೆ ಹೊಗಳಿಕೆ ಎಂದರೆ ತುಂಬಾ ಭಯ, ತೆಗಳಿಕೆ ಎಂದರೆ ಬಹಳ ಇಷ್ಟ. ತೆಗಳಿಕೆಗಳನ್ನು ಟೀಕೆಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಹೇಗೆ ಯಶಸ್ಸು ಪಡೆಯಬೇಕು ಎನ್ನುವುದು ಗೊತ್ತಿದೆ. ಹೊಗಳಿಕೆ ಬಹಳ ಸಾರಿ ದಾರಿ ತಪ್ಪಿಸುತ್ತವೆ. ಅದಕ್ಕೆ ದಯವಿಟ್ಟು ನಾನೂ ಭೂಮಿ ಮೇಲೆ ಇದ್ದೇನೆ, ಭೂಮಿ ಮೇಲೆ ಇರಲು ಬಿಡಿ ಎಂದರು.