ಗಡಿ ವಿವಾದ: ಕರ್ನಾಟಕದ ಒಂದಿಂಚು ಜಾಗವನ್ನ ಬಿಡುವುದಿಲ್ಲ, ಯಡಿಯೂರಪ್ಪ

ಗಡಿ ಭಾಗದಲ್ಲಿ ಕ್ಯಾತೆ ತೆಗೆಯುತ್ತಿರುವ ಶಿವಸೇನೆಗೆ ಎಚ್ಚರಿಕೆ ನೀಡಿದ ಸಿಎಂ ಯಡಿಯೂರಪ್ಪ| ಕರ್ನಾಟಕದ ಒಂದಿಂಚು ಜಾಗವನ್ನ ಬಿಡುವುದಿಲ್ಲ| ಈ ರೀತಿ ವಿವಾದ ಸೃಷ್ಟಿಸೋದು ಸರಿಯಲ್ಲ| ಗಡಿ ಭಾಗದ ಕನ್ನಡಿಗರು ಶಾಂತಿಯನ್ನ ಕಾಪಾಡಬೇಕು| ಹೇಳಿಕೆ ಮೂಲಕ ಗೊಂದಲ ಸೃಷ್ಟಿ ಮಾಡಬೇಡಿ|

Share this Video
  • FB
  • Linkdin
  • Whatsapp

ಬೆಂಗಳೂರು(ಡಿ.30): ಗಡಿ ಭಾಗದಲ್ಲಿ ಕ್ಯಾತೆ ತೆಗೆಯುತ್ತಿರುವ ಶಿವಸೇನೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕದ ಒಂದಿಂಚು ಜಾಗವನ್ನ ಬಿಡುವುದಿಲ್ಲ, ಈ ರೀತಿ ವಿವಾದ ಸೃಷ್ಟಿಸೋದು ಸರಿಯಲ್ಲ, ಗಡಿ ಭಾಗದ ಕನ್ನಡಿಗರು ಶಾಂತಿಯನ್ನ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಹೇಳಿಕೆ ಮೂಲಕ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂತ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಇಂತ ಹೇಳಿಕೆಗಳ ಬಗ್ಗೆ ತಲೆಕಡಿಸಿಕೊಳ್ಳಬೇಡಿ, ಗಡಿಯಲ್ಲಿ ಕನ್ನಡಿಗರು ಶಾಂತಿಯನ್ನ ಕಾಪಾಡಬೇಕು. ಕರ್ನಾಟಕದ ಒಂದಿಂಚೂ ಜಾಗವನ್ನ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ. 

Related Video