ಜನತಾ ಕರ್ಫ್ಯೂ: ಮನೆಯಲ್ಲೇ ಉಳಿದ ಸಿಎಂ ಯಡಿಯೂರಪ್ಪ

ಜನತಾ ಕರ್ಫ್ಯೂಗೆ ರಾಜ್ಯದ ಜನತೆಯಿಂದ ಸಂಪೂರ್ಣ ಬೆಂಬಲ| ಜನತಾ ಕರ್ಫ್ಯೂಗೆ ಕರೆ ನೀಡಿದ್ದ ಪ್ರಧಾನಿ ಮೋದಿ| ರಾಜ್ಯದ ಜನತೆಗೆ ಧನ್ಯವಾದ ತಿಳಿಸಿದ ಯಡಿಯೂರಪ್ಪ|

First Published Mar 22, 2020, 11:04 AM IST | Last Updated Mar 22, 2020, 11:04 AM IST

ಬೆಂಗಳೂರು[ಮಾ.22]:  ಕೊರೋನಾ ವೈರಸ್ ಗಳನ್ನ ನಿಗ್ರಹ ಮಾಡುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಪ್ರಧಾನಿ ಕರೆಗೆ ಕರ್ನಾಟಕದ ಜನತೆ ಅಭೂತಪೂರ್ವವಾಗಿ ಬೆಂಬಲ ನೀಡಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. 

ಕೊರೋನಾ ವೈರಸ್: ಕುತೂಹಲದಿಂದ ರಸ್ತೆಗೆ ಬಂದ್ರೆ ಬೀಳುತ್ತೆ ಕೇಸ್

ಇಂದು[ಭಾನುವಾರ] ಬೆಳಿಗ್ಗೆ 6-30 ಕ್ಕೆ ಡಾ. ದೇಗವಿಶೆಟ್ಟಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಡಾ. ಅಶ್ವತ್ ನಾರಾಯಣ, ಸಚಿವ ಡಾ. ಸುಧಾಕರ್ ಇತರೆ ಅಧಿಕಾರಿಗಳ ಜೊತೆಗೆ ಇವತ್ತಿನ ಸ್ಥಿತಿಗಳು ಹಾಗೂ ಮುಂದೆ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದ್ದಾರೆ. 

Video Top Stories