5, 8ನೇ ತರಗತಿಗೆ ಪರೀಕ್ಷೆ :ಬಯಲಾಗಲಿದೆಯಾ CBSE ಬೋಧಿಸುತ್ತಿರುವ ಖಾಸಗಿ ಶಾಲೆಗಳ ಬಣ್ಣ

5 ಮತ್ತು 8ನೇ ತರಗತಿಗೆ ಈ ವರ್ಷ ಮೌಲ್ಯಾಂಕನ ಪರೀಕ್ಷೆ ಇರುವುದರಿಂದ ಖಾಸಗಿ ಶಾಲೆಗಳ ಬಣ್ಣ ಬಯಲಾಗುವ ಸಾಧ್ಯತೆ ಇದೆ. 

First Published Mar 22, 2023, 11:32 AM IST | Last Updated Mar 22, 2023, 11:32 AM IST

5 ಮತ್ತು 8ನೇ ತರಗತಿಗೆ ಈ ವರ್ಷ ಮೌಲ್ಯಾಂಕನ ಪರೀಕ್ಷೆ ಇರುವುದರಿಂದ ಖಾಸಗಿ ಶಾಲೆಗಳ ಬಣ್ಣ ಬಯಲಾಗುವ ಸಾಧ್ಯತೆ ಇದೆ. ಸ್ಟೇಟ್‌ ಸಿಲೆಬಸ್‌ಗೆ ನೋಂದಣಿ ಮಾಡಿಕೊಂಡಿರುವ ಶಾಲೆಗಳು  ಸಿಬಿಎಸ್‌ಇ ಪಾಠ ಮಾಡುತ್ತಿದ್ದು, ಖಾಸಗಿ ಶಾಲೆಗಳಿಗೆ ಆತಂಕ ಶುರುವಾಗಿದೆ. ರಾಜ್ಯ ಪಠ್ಯಕ್ರಮ ಬೋಧನೆಗೆ ನೋಂದಣಿ ಮಾಡಿಕೊಂಡಿರುವ ಶಾಲೆಗಳಿಗೆ   CBSE ಪಠ್ಯಕ್ರಮ ಬೋಧನೆಗೆ ಮಾನ್ಯತೆ ಇಲ್ಲ. ಹೀಗಾಗಿ ಪರೀಕ್ಷೆ ಹಿನ್ನೆಲೆ ಮಕ್ಕಳಿಗೆ ದಿಡೀರನೆ ರಾಜ್ಯ ಪಠ್ಯಕ್ರಮ ಬೋಧನೆಗೆ ಖಾಸಗಿ ಶಾಲೆ ಮುಂದಾಗಿದೆ.  ಪರೀಕ್ಷೆ ರದ್ದುಗೊಳಿಸಲು ಶಾಲೆಗಳು ಕೋರ್ಟ್‌ ಮೆಟ್ಟಿಲೇರಿದೆ.