ಕನ್ನಡದ ಕೋಟ್ಯಧಿಪತಿ ಸ್ಫೂರ್ತಿ: 30-40 ಸಾವಿರ ಪ್ರಶ್ನೆಗಳಿಗೆ ಉತ್ತರ ನೀಡುವ ಪುಟ್ಟ ಅಣ್ಣ-ತಂಗಿ

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಇಬ್ಬರು ಪುಟ್ಟ ಮಕ್ಕಳು ಸಾಧನೆ ನಿಜಕ್ಕೂ ಮೆಚ್ಚುವಂತದ್ದು.

First Published Nov 14, 2022, 5:38 PM IST | Last Updated Nov 14, 2022, 5:38 PM IST

ಮುದಗಲ್ ಪಟ್ಟಣದ ಮಕ್ಕಳಾದ, 5ನೇ ತರಗತಿಯ ಶಿವರಾಜ್ ಹಾಗೂ 4ನೇ ತರಗತಿಯ ಸಂಜನಾ ಇಬ್ಬರು ಅಣ್ಣ-ತಂಗಿ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನೋಡಿ ಓದಲು ಶುರು ಮಾಡಿದ ಈ ಇಬ್ಬರು ವರ್ಲ್ಡ್ ಆಫ್ ರೆಕಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಆಶಾ ಕಾರ್ಯಕರ್ತೆ ಚಂದ್ರಕಲಾ ಯಲ್ಲಪ್ಪ ದಂಪತಿ ಮಕ್ಕಳಾದ ಇವರು ಸತತ ಅಭ್ಯಾಸ ಮಾಡಿ ಇತಿಹಾಸ, ಸಾಮಾನ್ಯ ಜ್ಞಾನ, ಸಿನಿಮಾ, ಕ್ರೀಡೆ ಮತ್ತು ಸಂವಿಧಾನ ಹೀಗೆ ಎಲ್ಲಾ ವಿಷಯಗಳ ಬಗ್ಗೆ 30-40 ಸಾವಿರಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರ ನೀಡುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ನಾಡು-ನುಡಿ-ದೇಶ ಯಾವುದೇ ವಿಷಯವೂ ಇರಲಿ ಮಕ್ಕಳು ಪಟ್ ಅಂತ ಉತ್ತರ ಹೇಳುತ್ತಾರೆ. ಗುರುಗಳಾದ ಮಹಾಂತೇಶ್ ಈ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 

ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳು ಮುಂಚೂಣಿ: ಓಪನ್ ಡೋರ್ಸ್ ವರದಿ