ಪೋಷಕರೇ ಎಚ್ಚರ: ಆಟವಾಡುತ್ತಾ ನೀರಿನ ಮೋಟರ್ ಹಿಡಿದ ಮಗು ಕರೆಂಟ್‌ ಶಾಕ್‌ನಿಂದ ಸಾವು!

ಮೃತ ಮಂಜು ಸೊರಟೂರು ಗ್ರಾಮದ ಆಂಜನೇಯ ಎಂಬುವರ ಪುತ್ರನಾಗಿದ್ದಾನೆ ಮನೆಯಲ್ಲಿ ಆಟವಾಡುತ್ತಾ ನೀರಿನ ಮೋಟರ್ ಹಿಡಿದಿದ್ದರಿಂದ ವಿದ್ಯುತ್‌ ಶಾಕ್‌ ತಗುಲಿ ಮೃತಪಟ್ಟಿದ್ದಾನೆ. 

First Published Jan 7, 2025, 11:38 AM IST | Last Updated Jan 7, 2025, 11:38 AM IST

ದಾವಣಗೆರೆ(ಜ.07):  ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ.   ಮನೆಯಲ್ಲಿ ಆಟವಾಡುತ್ತಾ ನೀರಿನ ಮೋಟರ್ ಹಿಡಿದು ಒಂದೂವರೆ ವರ್ಷದ ಮಗು ವಿದ್ಯುತ್‌ ಶಾಕ್‌ಗೆ ಬಲಿಯಾಗಿದೆ. ಒಂದೂವರೆ ವರ್ಷದ ಮಂಜು ಮೃತ ಬಾಲಕ. ಮೃತ ಮಂಜು ಸೊರಟೂರು ಗ್ರಾಮದ ಆಂಜನೇಯ ಎಂಬುವರ ಪುತ್ರನಾಗಿದ್ದಾನೆ ಮನೆಯಲ್ಲಿ ಆಟವಾಡುತ್ತಾ ನೀರಿನ ಮೋಟರ್ ಹಿಡಿದಿದ್ದರಿಂದ ವಿದ್ಯುತ್‌ ಶಾಕ್‌ ತಗುಲಿ ಮೃತಪಟ್ಟಿದ್ದಾನೆ. ತಾಯಿ ನೀರಿನ ಮೋಟರ್ ಆನ್ ಮಾಡಿ ನೀರು ತುಂಬಿಸುವಾಗ ಘಟನೆ ನಡೆದಿದೆ. ಮಗು ಸಾವಿನಿಂದ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. 

ಹುಡುಗಿಯರ ಜತೆಗೆ ಪೋಲಿ ಪ್ರಿನ್ಸಿಪಾಲ್ ಚಾಟಿಂಗ್: ಸಚಿನ್‌ ಕುಮಾರನ ಚಳಿ ಬಿಡಿಸಿದ ವಿದ್ಯಾರ್ಥಿನಿಯರು!