Asianet Suvarna News Asianet Suvarna News

ಕೊರೋನಾ ಎಫೆಕ್ಟ್: ಮಂಗ್ಳೂರಲ್ಲಿ ಪಾತಾಳಕ್ಕಿಳಿದ ಚಿಕನ್ ಬೆಲೆ, ಮೀನು ದುಬಾರಿ

ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆ ಕರಾವಳಿಯಲ್ಲಿ ಕೋಳಿ ಬೆಲೆ ಕಡಿಮೆಯಾಗಿದೆ. ಪರಿಣಾಮ ಮೀನಿನ ಬೆಲೆ ಹೆಚ್ಚಾಗಿದೆ. ಕಳೆದೆರಡು ವಾರದಿಂದ ಕೋಳಿ, ಮೊಟ್ಟೆ ಹಣ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಮೀನಿನ ದರ ಗಗನಕ್ಕೇರುತ್ತಿದೆ.

ಮಂಗಳೂರು(ಮಾ.06): ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆ ಕರಾವಳಿಯಲ್ಲಿ ಕೋಳಿ ಬೆಲೆ ಕಡಿಮೆಯಾಗಿದೆ. ಪರಿಣಾಮ ಮೀನಿನ ಬೆಲೆ ಹೆಚ್ಚಾಗಿದೆ. ಕಳೆದೆರಡು ವಾರದಿಂದ ಕೋಳಿ, ಮೊಟ್ಟೆ ಹಣ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಮೀನಿನ ದರ ಗಗನಕ್ಕೇರುತ್ತಿದೆ. ಕೋಳಿ ಮಾಂಸ ಖರೀದಿಸಲು ಜನ ಹಿಂದೇಟು ಹಾಕುತ್ತಿದ್ದು, ಬಂಗುಡೆ, ಬೂತಾಯಿ ಮೀನಿನ ದರ ಹೆಚ್ಛಾಗಿದೆ. ಸಿಗಡಿ, ಅಂಜಲ್ ಮೀನು ಸೇರಿತ ಇತರ ಮೀನುಗಳ ಬೆಲೆಯೂ ಹೆಚ್ಚಾಗಿದೆ.

ಮಾಸ್ಕ್‌ ಸುಲಿಗೆ : ಕೊರೋನಾ ವದಂತಿ ಹಬ್ಬಿಸಿದ್ರೆ ಹುಷಾರ್‌!

ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜನ ಕೋಳಿ ಮಾಂಸ ಕೊಳ್ಳುತ್ತಿಲ್ಲ. ಕೋಳಿಗೂ ಕೊರೋನಾಗೂ ಸಂಬಂಧ ಇಲ್ಲ, ಕೋಳಿ ತಿನ್ನುವುದರಿಂದ ಸಮಸ್ಯೆ ಇಲ್ಲ ಎಂದರೂ ಜನ ಕೋಳಿ ಮಾಂಸ ಕೊಳ್ಳಲು ಹಿಂದೇಟು ಹಾಕ್ತಿದ್ದಾರೆ.

Video Top Stories