KSRTC : ಬಸ್ ಕಂಡಕ್ಟರ್‌ ಹುದ್ದೆಯಲ್ಲಿ ಮೋಸ: ಫಿಸಿಕಲ್‌ ಟೆಸ್ಟ್‌ನಲ್ಲಿ ಕಬ್ಬಿಣದ ರಾಡ್‌ ಕಟ್ಟಿಕೊಂಡ ಆಕಾಂಕ್ಷಿಗಳು

ರಾಜ್ಯದಲ್ಲಿ ಪಿಎಸ್ಐ ಆಯ್ತು, ಮೆಡಿಕಲ್‌ ಆಯ್ತು. ಇದೀಗ ಕಂಡಕ್ಟರ್‌ ಹುದ್ದೆಯಲ್ಲೂ ಮೋಸ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

First Published Feb 11, 2023, 10:31 AM IST | Last Updated Feb 11, 2023, 1:38 PM IST

ಬಸ್‌ ಕಂಡಕ್ಟರ್‌ ಆಗಲು ಅಭ್ಯರ್ಥಿಗಳಿಂದ ವಾಮ ಮಾರ್ಗ ಮುಂದುವರೆಸಲಾಗಿದೆ.  1619 ಚಾಲಕ ಹುದ್ದೆಗಳಿಗೆ KSRTC ಯಿಂದ ನೇಮಕಾತಿ ಪ್ರಕ್ರಿಯೆ ನಡೆದಿದ್ದು, KSRTC ಕಂಡಕ್ಟರ್‌ ಆಗಲು ಕನಿಷ್ಟ 55 ಕೆ.ಜಿ ತೂಕ ಇರಲೇಬೇಕು. ಹೀಗಾಗಿ ಫಿಸಿಕಲ್‌ ಟೆಸ್ಟ್‌ನಲ್ಲಿ ಕಲ್ಲು ಕಬ್ಬಿಣದ ರಾಡ್‌'ನ್ನು ಆಕಾಂಕ್ಷಿಗಳು ಕಟ್ಟಿಕೊಂಡಿರುವ ಘಟನೆ ನಡೆದಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನೇಮಕಾತಿ ವೇಳೆ ಅಕ್ರಮ ಪತ್ತೆಯಾಗಿದೆ.  ಸೊಂಟಕ್ಕೆ ಕಬ್ಬಿಣ ಇಟ್ಟುಕೊಂಡು ಉದ್ಯೋಗಾಕಾಂಕ್ಷಿಗಳು ಬಂದಿದ್ದಾರೆ. ಇನ್ನು ಕೆಲವು ಕಿಲಾಡಿ ಅಭ್ಯರ್ಥಿಗಳು ಚಪಾತಿ ಹಿಟ್ಟು ಮೈಗೆ ಮೆತ್ತಿಕೊಂಡು ಬಂದಿದ್ದಾರೆ. ಚಪಾತಿ ಹಿಟ್ಟು ಹಾಗೂ ಕಬ್ಬಿಣ ಹಾಕಿಕೊಂಡು ತೂಕ ಹೆಚ್ಚಿಸಿಕೊಳ್ಳುವ ಪ್ಲಾನ್‌ ನಡೆಸಿದ್ದಾರೆ.