Asianet Suvarna News Asianet Suvarna News

ಕೇವಲ 200ರೂ. ಗೆ ಹೊಚ್ಚ ಹೊಸ ಮೊಬೈಲ್, ಮುಗಿಬಿದ್ದ ಜನ!

 ಕಡಿಮೆ ದರದಲ್ಲಿ ಏನಾದರೂ ವಸ್ತುಗಳು ದೊರೆಯುತ್ತವೆ ಎಂದರೆ ಅಲ್ಲಿ ಜನ ನೀರು, ನೆರಳು, ಇಲ್ಲದೆ ಸರತಿ ಸಾಲಿನಲ್ಲಿ ನಿಂತುಕೊಂಡು ಆ ವಸ್ತುಗಳನ್ನು ಪಡೆಯಲು ಯತ್ನಿಸುತ್ತಾರೆ.

First Published Dec 10, 2019, 10:01 PM IST | Last Updated Dec 11, 2019, 4:27 PM IST

ಚಿತ್ರದುರ್ಗ(ಡಿ. 10)  ಕಡಿಮೆ ದರದಲ್ಲಿ ಏನಾದರೂ ವಸ್ತುಗಳು ದೊರೆಯುತ್ತವೆ ಎಂದರೆ ಅಲ್ಲಿ ಜನ ನೀರು, ನೆರಳು, ಇಲ್ಲದೆ ಸರತಿ ಸಾಲಿನಲ್ಲಿ ನಿಂತುಕೊಂಡು ಆ ವಸ್ತುಗಳನ್ನು ಪಡೆಯಲು ಯತ್ನಿಸುತ್ತಾರೆ.

ಅಂದಹಾಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಸಂಗೀತ ಮೊಬೈಲ್ ಶೋರೂಮ್ ಒಂದರಲ್ಲಿ ಕೇವಲ 200 ರೂ. ಗೆ ಒಂದು ಕೀಪ್ಯಾಡ್ ಮೊಬೈಲ್ ಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು.

ಮೊಬೈಲ್ ಖರೀದಿ ಮಾಡಿದ್ರೆ ಕೆಜಿ ಈರುಳ್ಳಿ ಉಚಿತ

ಅಷ್ಟೆ ದುಡ್ಡಿಗೆ ಮೊಬೈಲ್ ಕೊಡುತ್ತಾರಾ ಎಂಬ ವಿಚಾರವೂ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಮೊದಲ 200 ಜನಕ್ಕೆ ಮಾತ್ರ ಸೀಮಿತವಾಗಿದ್ದು ಮೊದಲು ಬಂದವರಿಗೆ ಕೂಪನ್ ಕೊಡುತ್ತಿದ್ದಾರೆ ಎನ್ನಲಾಗಿದೆ. ಈ ಮೊಬೈಲ್ ಕೀಪ್ಯಾಡ್ ಆಗಿದ್ದು ಇದಕ್ಕೆ ಯಾವುದೇ ಗ್ಯಾರಂಟಿ ಮತ್ತು ವ್ಯಾರಂಟಿ ಇರುವುದಿಲ್ಲ ಇದು ನಮ್ಮ ಅಂಗಡಿಯ ಪ್ರಚಾರಕ್ಕಾಗಿ ಮಾತ್ರ ಎನ್ನುತ್ತಾರೆ ಅಂಗಡಿ ಸಿಬ್ಬಂದಿ. ಒಟ್ಟಿನಲ್ಲಿ ಚಿತ್ರದುರ್ಗದಲ್ಲಿ ಮೊಬೈಲ್ ಹವಾ ಎದ್ದಿದ್ದೆಂತೂ ಸುಳ್ಳಲ್ಲ.

Video Top Stories