ವರದಿ ಕೊಡಿ: ಕೇಂದ್ರದಿಂದ ಬಿಎಂಆರ್‌ಸಿಎಲ್ ಎಂಡಿಗೆ ಸೂಚನೆ
ನಿನ್ನೆ ನಾಗವಾರದ ಬಳಿ ನಡೆದಿದ್ದ ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವನ್ನಪ್ಪಿದ ಘಟನೆಯ ಕುರಿತು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನಿಯಮಿತದಿಂದ (ಬಿಎಂಆರ್‌ಸಿಎಲ್) ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದಿಂದ ವರದಿಯನ್ನು ಕೇಳಿದೆ.
ಬೆಂಗಳೂರು (ಜ.11): ನಿನ್ನೆ ನಾಗವಾರದ ಬಳಿ ನಡೆದಿದ್ದ ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವನ್ನಪ್ಪಿದ ಘಟನೆಯ ಕುರಿತು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನಿಯಮಿತದಿಂದ (ಬಿಎಂಆರ್‌ಸಿಎಲ್) ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದಿಂದ ವರದಿಯನ್ನು ಕೇಳಿದೆ.
ಈಗಾಗಲೇ ನಾಗಾರ್ಜುನ ಕಂಪನಿಯ ಮಾಲೀಕರು, ಇಂಜಿನಿಯರ್‌ಗಳು ಸೇರಿ ಎಂಟು ಜನ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತು ಈಗಾಗಲೇ ಬಿಎಂಆರ್‌ಸಿಎಲ್ ವತಿಯಿಂದ ಮೂವರು ಇಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ. ಮೆಟ್ರೋ ಕಾಮಾಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸಾರ್ವಜನಿಕರು ಪ್ರತಿಭಟನೆ ಆರಂಭಿಸಿದ್ದಾರೆ. ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ ನಡೆಸುತ್ತಿರುವ ಅಂಡರ್ ಗ್ರೌಂಡ್ ಮೆಟ್ರೋ ಕಾಮಾಗಾರಿ ತಡೆದು ಪ್ರತಿಭಟನೆ ಮಾಡುತ್ತಿದ್ದು, ಪೊಲೀಸರು ಸಮಾಧಾನಪಡಿಸಿ ಕಳುಹಿಸಿದ್ದಾರೆ. ವಿವಿಧೆಡೆ ಕಂಪನಿ ಬೋರ್ಡ್ ಗಳಿಗೆ ಮಸಿ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಟ್ರೋ ಪಿಲ್ಲರ್ ದುರಂತ ಪ್ರಕರಣದ ಘಟನಾ ಸ್ಥಳಕ್ಕೆ IISC ತಜ್ಞರ ಬೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.