BIG 3: 10 ವರ್ಷದಿಂದ ಉದ್ಘಾಟನೆಯಾಗದೇ ಪಾಳು ಬಿದ್ದಿರುವ ಮಾಲೂರಿನ ಅಂಬೇಡ್ಕರ್ ಭವನ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿ  92 ಲಕ್ಷ ವೆಚ್ಚದಲ್ಲಿ 2012ನೇ ಇಸವಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಇಂದು ಇದು ಪಾಳು ಬಿದ್ದ ಕಟ್ಟಡವಾಗಿ ಅನೈತಿಕ ಚಟುವಟಿಕೆಯ ತಾಣವಾಗಿದೆ.

Share this Video
  • FB
  • Linkdin
  • Whatsapp

ಕೋಲಾರ (ಸೆ.19): ಮಾಲೂರು ತಾಲೂಕಿನ 60 ರಿಂದ 70 ಸಾವಿರ ಜನ ದಲಿತ ಸಮುದಾಯಕ್ಕೆ ಸೇರಿರುವವರು ಇದ್ದಾರೆ,ಎಲ್ಲರಿಗೂ ಅನುಕೂಲ ಇರೋದಿಲ್ಲ, ಹೀಗಾಗಿ ಮದುವೆ, ಶುಭಾ ಸಮಾರಂಭ ಮಾಡೋದಕ್ಕೆ ಅನ್ನೋ ಉದ್ದೇಶದಿಂದ 92 ಲಕ್ಷ ವೆಚ್ಚದಲ್ಲಿ 2012ನೇ ಇಸವಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನ ಶಾಸಕರಾದ ಕೃಷ್ಣಯ್ಯ ಶೆಟ್ಟಿ, ಸಚಿವರಾಗಿದ್ದ ಕೆ.ಎಸ್ ಈಶ್ವರಪ್ಪ,ಕೇಂದ್ರ ಸಚಿವರಾಗಿದ್ದ ಕೆ.ಎಚ್ ಮುನಿಯಪ್ಪ ಎಲ್ಲರೂ ಸೇರಿಕೊಂಡು ಕ್ಯಾಮರಾ ಮುಂದೆ ಫೋಸ್ ಕೊಟ್ಟು ಉದ್ಘಾಟನೆ ಮಾಡಿ ಹೋಗಿದ್ದು ಬಿಟ್ರೆ ಇದುವರೆಗೂ ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಇನ್ನು ಆಶ್ಚರ್ಯ ಅಂದ್ರೆ ಹೇಳಿ ಕೇಳಿ ಡಾ. ಬಿ.ಆರ್ ಅಂಬೇಡ್ಕರ್ ನಿಗಮ ಮಂಡಳಿ ಅಧ್ಯಕ್ಷರ ತವರು ಜಿಲ್ಲೆ ಕೋಲಾರದಲ್ಲೇ ಈ ಪರಿಸ್ಥಿತಿ ಇದೆ. ಎಚ್.ನಾಗೇಶ್ ಅವರಿಗೆ ಅದೆಷ್ಟೇ ಬಾರಿ ಮನವಿ ಮಾಡಿದ್ರು ಅದ್ಯಾಕೆ ಕಾಯಕಲ್ಪಕ್ಕೆ ಮುಂದಾಗ್ತಿಲ್ಲೋ ತಿಳಿಯು ತ್ತಿಲ್ಲ.ಇನ್ನು 10 ವರ್ಷಗಳಿಂದ ಇಲ್ಲಿ ಯಾವುದೇ ಕಾರ್ಯಕ್ರಮ ನಡೆಯದೇ ಇರೋದಕ್ಕೆ ಕುಡುಕರಿಗೆ ಮತ್ತು ಅನೈತಿಕಾ ಚಟುವಟಿಕೆ ನಡೆಸುವವರಿಗೆ ಇದು ಅಚ್ಚುಮೆಚ್ಚಿನ ಸ್ಥಳವಾಗಿದೆ.

Related Video