'Hindu' Remark Row: ಹಿಂದೂ ಧರ್ಮದ ಕುರಿತು ಜಾರಕಿಹೊಳಿ ಹೇಳಿಕೆ: ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಲು ಬಿಎಸ್‌ವೈ ಪಟ್ಟು

B S Yediyurappa 'Hindu' Remark Row: ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ ವಿರುದ್ಧ ಬಿಎಸ್‌ವೈ ಕಿಡಿ ಕಾರಿದ್ದಾರೆ.

First Published Nov 8, 2022, 4:37 PM IST | Last Updated Nov 8, 2022, 4:40 PM IST

ಹಿಂದೂ ಪದದ ಅರ್ಥವೇ ಅಶ್ಲೀಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ಈ ವಿಚಾರವಾಗಿ ಸತೀಶ್‌ ಜಾರಕಿಹೊಳಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಬಿಎಸ್‌ವೈ ಆಗ್ರಹಿಸಿದ್ದಾರೆ. ಹಿಂದೂಗಳಿಗೆ ಅವಮಾನದ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಕಾಂಗ್ರೆಸ್‌ ಕೇವಲ ಖಂಡನೆ ಮಾಡಿದರೆ ಸಾಕಾಗೋದಿಲ್ಲ, ಸತೀಶ್‌ ಜಾರಕಿಹೊಳಿ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಬೇಕು ದೊಡ್ಡವನಾಗುತ್ತೇನೆ ಎಂದುಕೊಂಡಿದ್ದರೆ ಅದೊಂದು ಭ್ರಮೆ. ಸತೀಶ್‌ ಜಾರಕಿಹೊಳಿ ಗೌರವದಿಂದ ನಡೆದುಕೊಳ್ಳಬೇಕು ಎಂದರು.