ನೀರು ನೋಡಲು ಹೊರ ಬಂದವನು ಮರಳಿ ಮನೆಗೆ ಬರಲೇ ಇಲ್ಲ: ಕಣ್ಣು ಮಿಟುಕಿಸಿದಾಗ ಚಿಗುರಿದ್ಧ ಆಸೆ ಈಡೇರಲೇ ಇಲ್ಲ!

ಮಳೆಯಲ್ಲಾ ಇದು ಮೃತ್ಯುಮಳೆ.. ವರುಣನ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದಿದ್ದ ಕರುನಾಡಿನಲ್ಲೀಗ ಪುಟ್ಟ ಜೀವಗಳ ಸಾವಿನ ಶೋಕ.. ಒಂದು ಕಡೆ ಮಳೆ ನೀರ ನೋಡಲು ಹೋದ ಬಾಲಕ ಮರಳಿ ಮನೆಗೆ ಬರಲೇ ಇಲ್ಲ. 

Share this Video
  • FB
  • Linkdin
  • Whatsapp

ಮಳೆಯಲ್ಲಾ ಇದು ಮೃತ್ಯುಮಳೆ.. ವರುಣನ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದಿದ್ದ ಕರುನಾಡಿನಲ್ಲೀಗ ಪುಟ್ಟ ಜೀವಗಳ ಸಾವಿನ ಶೋಕ.. ಒಂದು ಕಡೆ ಮಳೆ ನೀರ ನೋಡಲು ಹೋದ ಬಾಲಕ ಮರಳಿ ಮನೆಗೆ ಬರಲೇ ಇಲ್ಲ. ಇನ್ನೊಂದು ಕಡೆ ಆಟವಾಡ್ತಿದ್ದ ಪುಟ್ಟ ಕಂದನ ಹೆಗಲೇರಿಬಿಟ್ಟಿದ್ದ ಜವರಾಯ. ಬಾಳಿ ಬದುಕಬೇಕಿದ್ದ ಜೀವಗಳು ಮತ್ತೆಂದು ಬಾರದ ಲೋಕಕ್ಕೆ ಹೋಗಿವೆ. ಪೋಷಕರ ಬೆಟ್ಟದಷ್ಟು ಕನಸುಗಳು ಛಿದ್ರ ಛಿದ್ರವಾಗಿದೆ. ಈಗ ಉಳಿದಿರೋದು ಕೇವಲ ನೋವು… ಶೋಕ.. ಆಕ್ರಂದನ.. ಜೊತೆಗೆ ಒಂದಿಷ್ಟು ಆಕ್ರೋಶ. ಇದೇ ಹೊತ್ತಿನ ವಿಶೇಷ ಮೃತ್ಯು ಮಳೆ.. ಹುಷಾರು ಮಕ್ಕಳೇ. ಹಾವೇರಿಯ ಬಾಲಕನ ಸಾವಿನ ಜೊತೆಗೆ ವಿಜಯಪುರದಲ್ಲಿ ಪುಟ್ಟ ಕಂದಮ್ಮವೊಂದು ರಣಮಳೆಗೆ ಬಲಿಯಾಗಿದೆ. 

ಹಾವೇರಿಯಲ್ಲಿ 10 ವರ್ಷದ ಬಾಲಕ ಚರಂಡಿಗೆ ಬಿದ್ದು ಸಾವಪ್ಪಿದ್ರೆ ವಿಜಯಪುರದಲ್ಲಿ ಮೃತ್ಯುಮಳೆ ಬಲಿ ಪಡೆದಿರೋದು ಪುಟ್ಟ ಕಂದನನ್ನ. ಇಲ್ಲಿಯೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣಿಸ್ತಿದೆ ಅದೇ ಕಾರಣಕ್ಕೆ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ. ಹೀಗೆ, ಮೃತ್ಯುಮಳೆಗೆ ಎರಡು ಜೀವಗಳು ಬಲಿಯಾಗಿದ್ರೆ ಮಳೆಯಿಂದ ತತ್ತರಿಸಿರುವ ರಾಜ್ಯರಾಜಧಾನಿ ಇನ್ನೂ ಚೇತರಿಸಿಕೊಂಡಿಲ್ಲ. ಮಳೆ ಕಡಿಮೆಯಾಗಿದ್ರೂ ಅದ್ರ, ಎಫೆಕ್ಟ್ ಇನ್ನೂ ಹೋಗಿಲ್ಲ. ಹಾವೇರಿಯಲ್ಲಿ 10 ವರ್ಷದ ಬಾಲಕ ಮಳೆಗೆ ಬಲಿಯಾಗಿದ್ದಾನೆ. ವಿಜಯಪುರದಲ್ಲಿ 2 ವರ್ಷದ ಪುಟ್ಟ ಕಂದನ ಸಾವಾಗಿದೆ. ಈ ಮಧ್ಯೆ ಕಳೆದ ಮೂರ್ನಾಲ್ಕು ದಿನದಿಂದ ರಣಮಳಗೆ ಸಾಕ್ಷಿಯಾಗಿದ್ದ ಬೆಂಗಳೂರಿನಲ್ಲಿ ಮಳೆಯಬ್ಬರ ಕಡಿಮೆಯಾಗಿದ್ರೂ ಅದು ಕೊಟ್ಟಿರುವ ಪೆಟ್ಟು ಇನ್ನು ವಾಸಿಯಾಗಿಲ್ಲ.

Related Video