Asianet Suvarna News Asianet Suvarna News

ಮನೆ ಕಟ್ಟಿಕೊಡ್ಲಿಲ್ಲ ಅಂದ್ರೆ ಸರ್ಕಾರವನ್ನೇ ಕೆಡವಿ ಬಿಡ್ತೇನೆ ಎಂದ ಬಿಜೆಪಿ ಶಾಸಕ

Aug 13, 2019, 4:23 PM IST

ಬೆಳಗಾವಿ, (ಆ.13}: ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡದಿದ್ದರೆ ಸರ್ಕಾರವನ್ನೇ ಕೆಡವುತ್ತೇನೆ ಎಂದು ಅರಭಾವಿ  ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಮೂಲಕ ಸಂತ್ರಸ್ತರಿಗೆ ಅಭಯ ನೀಡಿದರು.  ಅರಭಾವಿ ಮತಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಪ್ರವಾಸ ಮಾಡಿದ ಶಾಸಕರು, ಸೋಮವಾರ ಘಟಪ್ರಭಾ ನದಿ ದಂಡೆಯ ಮೂಡಲಗಿ ತಾಲೂಕಿನ ತಿಗಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ ಜಾರಕಿಹೊಳಿ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.