ನಂದಿಹಳ್ಳಿ ಗ್ರಾಮದ ಜನರ ಕನಸು ನನಸು, ಮನೆ ಮನೆಗೂ ಬಂತು ನೀರು..!

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಂದಿಹಳ್ಳಿ ಗ್ರಾಮದ ಈ ಕುಡಿಯುವ ನೀರಿನ ಸಮಸ್ಯೆಯ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ನ ಬಿಗ್-3 ಯಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತು.

First Published Mar 21, 2023, 2:55 PM IST | Last Updated Mar 21, 2023, 2:55 PM IST

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಂದಿಹಳ್ಳಿ ಗ್ರಾಮದ ಈ ಕುಡಿಯುವ ನೀರಿನ ಸಮಸ್ಯೆಯ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ನ ಬಿಗ್-3 ಯಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತು.ಇಇ ಸತೀಶ್, ಎಇಇ  ರಾಹುಲ್, ಜೆಇ ಶಿವಪುತ್ರ, ಪಿಡಿಓ ಶಾರದಾ ಸೇರಿದಂತೆ ಅಧಿಕಾರಿಗಳ ದಂಡು ನಂದಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಹಾಗೇ  ಕೆಲವು ತಿಂಗಳಲ್ಲಿ ಗ್ರಾಮಕ್ಕೆ ನೀರು ಒದಗಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದು, ಗ್ರಾಮಸ್ಥರಿಗೆ ನೀರು ಕುಡಿಯಲು ತಾತ್ಕಾಲಿಕವಾಗಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗಿದೆ. ಇನ್ನು ನೀರು ಕಂಡು ಅಲ್ಲಿನ ಜನರ ಚಿತ್ರಣ ಬದಲಾಗಿದ್ದು, ನಂದಿಹಳ್ಳಿ ಗ್ರಾಮದ ಪ್ರತಿಯೊಂದ ಮನೆ ಮನೆಗೆ ನೀರು ಬಂದಿದೆ. ಇದರಿಂದ ಅಲ್ಲಿನ ಜನರಿಗೆ ಹತ್ತಾರು ವರ್ಷದ ನೀರಿನ ಸಮಸ್ಯೆಗೆ  ಮುಕ್ತಿ ಸಿಕ್ಕಿದೆ.