BIG 3: ಸುವರ್ಣ ನ್ಯೂಸ್ ಫಲಶ್ರುತಿ: ಕೊಪ್ಪಳ ಜಿಲ್ಲೆಯಲ್ಲಿ ಹೊಸ ಗುಣಮಟ್ಟದ ರಸ್ತೆ ನಿರ್ಮಾಣ

ಕೊಪ್ಪಳ ಜಿಲ್ಲೆಯಲ್ಲಿ ಕಳಪೆ ರಸ್ತೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣವಾಗಿ ಕಿತ್ತು ಬರುತ್ತಿತ್ತು. ಇದೀಗ ಸುವರ್ಣ ನ್ಯೂಸ್ ಫಲಶ್ರುತಿಯಿಂದ ಹೊಸ ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.

First Published Dec 19, 2022, 3:10 PM IST | Last Updated Dec 19, 2022, 3:10 PM IST

ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಾಣವಾದ ಆ ರಸ್ತೆ ಇದ್ದು ಇಲ್ಲದಂತಿತ್ತು. ರಸ್ತೆ ಕಳಪೆ ಕಾಮಗಾರಿಯಾಗಿದ್ದು, ಹೊಸದಾಗಿ ಗುಣಮಟ್ಟದ ರಸ್ತೆ ಮಾಡಿ ಎಂದು ಅಧಿಕಾರಿಗಳ, ಗುತ್ತಿಗೆದಾರರ ಬಳಿ ಮನವಿ ಮಾಡಿಕೊಂಡಿದ್ದರೂ ಸಹ ಯಾವುದೇ ಪ್ರಯೋಜನವಾಗಿದ್ದಿಲ್ಲ.‌ 15 ದಿನಗಳ ಹಿಂದೆ ಡಾಂಬಾರ್ ರಸ್ತೆಯನ್ನು 1.20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಈ ವೇಳೆಯಲ್ಲಿ ಗ್ರಾಮಸ್ಥರು ರಸ್ತೆ ಪುನರ್ ನಿರ್ಮಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಬಿಗ್3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಹೊಸೂರ್ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಒಂದು ವಾರದಲ್ಲಿ ಇನ್ನೊಮ್ಮೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುವುದಾಗಿ ತಿಳಿಸಿದರು. ಅದರಂತೆ ಗುತ್ತಿಗೆದಾರರ ಮೂಲಕ ಇದೀಗ ಕಳಪೆಯಾಗಿದ್ದ ರಸ್ತೆಯನ್ನು ತೆಗೆಸಿ, ಹೊಸ ಗುಣಮಟ್ಟದ ರಸ್ತೆಯನ್ನು ಮಾಡಿಸಿದ್ದಾರೆ.

ಹಣಕ್ಕಿಂತ ಜ್ಞಾನ ಸಂಪಾದನೆ ಮುಖ್ಯ: ಸಿಎಂ ಬಸವರಾಜ ಬೊಮ್ಮಾಯಿ