ಸರ್ಕಾರದ ಭಯವಿಲ್ಲ, ಪೊಲೀಸರ ಕ್ಯಾರೇ ಇಲ್ಲ; ರಾಜಾರೋಷವಾಗಿ ಕೊಲೆ ಮಾಡಿ 93 ಲಕ್ಷ ATM ಹಣ ಹೊತ್ತೊಯ್ದ ಖದೀಮರು!

ಬೀದರ್‌ನಲ್ಲಿ ಹಗಲು ಹೊತ್ತಿನಲ್ಲಿ ಎಟಿಎಂ ದರೋಡೆ ನಡೆದಿದ್ದು, ದುಷ್ಕರ್ಮಿಗಳು ಸಿಬ್ಬಂದಿಯನ್ನು ಕೊಂದು ಹಣದ ಬಾಕ್ಸ್‌ ಎತ್ತಿಕೊಂಡು ಹೋಗಿರುವ ವಿಡಿಯೋ ವೈರಲ್‌ ಆಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

First Published Jan 16, 2025, 12:39 PM IST | Last Updated Jan 16, 2025, 12:39 PM IST

ಬೀದರ್‌ (ಜ.16): ಸರ್ಕಾರ, ಪೊಲೀಸರ ಬಗ್ಗೆ ಯಾವುದೇ ಭಯವಿಲ್ಲದೆ ಹೋದರೆ, ಇಂಥ ಘಟನೆಗಳು ರಾಜಾರೋಷವಾಗಿ ನಡೆಯುತ್ತದೆ.  ಮೊದಲೆಲ್ಲಾ ರಾತ್ರಿಹೊತ್ತಲ್ಲಿ ನಡೆಯುತ್ತಿದ್ದ ಎಟಿಎಂ ದರೋಡೆಗಳು ಬೀದರ್‌ನಲ್ಲಿ ಹಗಲು ಹೊತ್ತಿನಲ್ಲಿಯೇ ರಾಜಾರೋಷವಾಗಿ ನಡೆದಿದೆ.

ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಎಟಿಎಂ ಸಿಬ್ಬಂದಿಯನ್ನು ಕೊಂದು ವಾಹನದಲ್ಲಿದ್ದ ಹಣದ ಬಾಕ್ಸ್‌ಅನ್ನು ರಾಜಾರೋಷವಾಗಿ ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ವ್ಯಕ್ತಿಯೊಬ್ಬ ಇದನ್ನು ತನ್ನ ಮೊಬೈಲ್‌ನಲ್ಲಿ ಶೂಟ್‌ ಮಾಡಿದ್ದಾನೆ.

Bidar: ಎಟಿಎಂಗೆ ಹಣ ಹಾಕಲು ಬಂದಾಗ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ವ್ಯಕ್ತಿ ಸಾವು!

ಕಪ್ಪು ಬಣ್ಣದ ಜಾಕೆಟ್‌ ಧರಿಸಿರುವ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದಿದ್ದಾರೆ. ಕೈಯಲ್ಲಿ ಪಿಸ್ತೂಲ್‌ ಹಿಡಿದಿದ್ದು ಕೂಡ ಕಂಡಿದೆ. ಹಾಡಹಗಲಲ್ಲೇ ಸಿಬ್ಬಂದಿಯನ್ನು ಕೊಲೆ ಮಾಡಿ, ಹಣದ ಬಾಕ್ಸ್‌ಅನ್ನು ಬೈಕ್‌ನ ಮುಂದುಗಡೆ ಇರಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ.


 

 

Video Top Stories