Bhatkal: ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಸೌಲಭ್ಯ ನೀಡುವಂತೆ ಪಟ್ಟು

ಮೊಗೇರರಿಗೆ ಈ ಹಿಂದೆ ನೀಡುತ್ತಿದ್ದ ಪರಿಶಿಷ್ಟಜಾತಿ ಪ್ರಮಾಣಪತ್ರ ವಿತರಿಸುವುದನ್ನು ಮುಂದುವರಿಸಬೇಕು ಮತ್ತು ಸರ್ಕಾರ ಸಮಾಜದವರಿಗೆ ಹೊಸದಾಗಿ ನೀಡುತ್ತಿರುವ ಪ್ರವರ್ಗ-1ರ ಪ್ರಮಾಣಪತ್ರ ರದ್ದುಪಡಿಸಬೇಕೆಂದು ಆಗ್ರಹಿಸಿ ತಾಲೂಕಿನ ಮೊಗೇರ ಸಮಾಜದ ಸಾವಿರಾರು ಮಂದಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದರು.

First Published Mar 24, 2022, 10:16 AM IST | Last Updated Mar 24, 2022, 10:16 AM IST

ಬೆಂಗಳೂರು (ಮಾ, 24): ಮೊಗೇರರಿಗೆ ಈ ಹಿಂದೆ ನೀಡುತ್ತಿದ್ದ ಪರಿಶಿಷ್ಟಜಾತಿ ಪ್ರಮಾಣಪತ್ರ ವಿತರಿಸುವುದನ್ನು ಮುಂದುವರಿಸಬೇಕು ಮತ್ತು ಸರ್ಕಾರ ಸಮಾಜದವರಿಗೆ ಹೊಸದಾಗಿ ನೀಡುತ್ತಿರುವ ಪ್ರವರ್ಗ-1ರ ಪ್ರಮಾಣಪತ್ರ ರದ್ದುಪಡಿಸಬೇಕೆಂದು ಆಗ್ರಹಿಸಿ ತಾಲೂಕಿನ ಮೊಗೇರ ಸಮಾಜದ ಸಾವಿರಾರು ಮಂದಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದರು.

ಇತ್ತೀಚೆಗೆ ಸರ್ಕಾರ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕಿನ ಬೆಳ್ನಿ ಮುಂತಾದ ಕಡೆ ಮೊಗೇರರಿಗೆ ಪ್ರವರ್ಗ-1ರಲ್ಲಿ ಜಾತಿ ಪ್ರಮಾಣಪತ್ರ ನೀಡಲು ಕಂದಾಯ ಇಲಾಖೆ ಮುಂದಾಗಿತ್ತು. ಇದರಿಂದ ತೀವ್ರ ಆಕ್ರೋಶಗೊಂಡ ಮೊಗೇರ ಸಮಾಜದ ಜನರು ಆಕ್ರೋಶಗೊಂಡು ಬೀದಿಗಿಳಿದಿದ್ದರು. ಸುಮಾರು 4.5 ಕಿ.ಮೀ. ಪ್ರತಿಭಟನಾ ರಾರ‍ಯಲಿ ನಡೆಸಿದ ಮೊಗೇರ ಸಮಾಜದ ಜನರು ತಾಲೂಕು ಪಂಚಾಯತ್‌ ಬಳಿ 20 ನಿಮಿಷಕ್ಕೂ ಹೆಚ್ಚು ಕಾಲ ಹೆದ್ದಾರಿ ತಡೆದು ಆಗ್ರಹಿಸಿದರು. ಬೇಡಿಕೆ ಈಡೇರಿಸದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.