ಲಾಕ್‌ಡೌನ್ ಏರಿಯಾದಲ್ಲಿ ಸುವರ್ಣ ನ್ಯೂಸ್: DCP ಶ್ರೀನಾಥ್ ಬುಲೆಟ್ ಮೂಲಕ ಸಿಟಿ ರೌಂಡ್!
ಸಮಾಜದ ರಕ್ಷಣೆಗೆ ನಿಂತ ಪೊಲೀಸರು| ಬೆಂಗಳೂರಿನಲ್ಲಿ ರಿಯಾಲಿಟಿ ಚೆಕ್ ನಡೆಸಿದ ಸುವರ್ಣ ನ್ಯೂಸ್|ಬುಲೆಟ್ ರೌಂಡ್‌ನಲ್ಲಿ ಸಿಟಿ ಸುತ್ತಿದ ಬೆಂಗಳೂರು ಆಗ್ನೆಯ ವಿಭಾಗದ ಡಿಸಿಪಿ ಶ್ರೀನಾಥ್|
ಬೆಂಗಳೂರು(ಏ.10): ಕೊರೋನಾ ಭೀಕರತೆ ನಡುವೆ ಸಾರ್ವಜನಿಕರನ್ನ ರಕ್ಷಿಸುವ ದೃಷ್ಟಿಯಿಂದ ಪೊಲೀಸರು ತಮ್ಮವರನ್ನ ಮರೆತು ಸಮಾಜದ ರಕ್ಷಣೆಗೆ ನಿಂತಿದ್ದಾರೆ. ಅದರಲ್ಲೂ ಬೆಂಗಳೂರು ಪೊಲೀಸರು ಕಾಲಿಗೆ ಚಕ್ರ ಕಟ್ಟಿಕೊಂಡ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.
ಗುರುವಾರ ಒಟ್ಟು 16 ಕೊರೋನಾ ಕೇಸ್ ಪತ್ತೆ, ಹೆಚ್ಚಿದ ಆತಂಕ
ಬೆಂಗಳೂರು ಆಗ್ನೆಯ ವಿಭಾಗದ ಡಿಸಿಪಿ ಶ್ರೀನಾಥ್ ಅವರು ಬುಲೆಟ್ ರೌಂಡ್‌ನಲ್ಲಿ ನಗರದ ಚಿತ್ರಣವನ್ನ ವಿವರಿಸಿದ್ದಾರೆ. ನಗರದ ಮಡಿವಾಳ ಆಡುಗೋಡಿ, ಕೋರಮಂಗಲದಲ್ಲಿ ಡಿಸಿಪಿ ಶ್ರೀನಾಥ್ ಸಿಟಿ ರೌಂಡ್ ಸುತ್ತಿದ್ದಾರೆ.