ಶ್ವೇತಾ ಗೌಡ ಬಂಧನ: ವರ್ತೂರು ಪ್ರಕಾಶ್ ಹೇಳಿದ್ದೇನು?
ಸಮಾಜ ಸೇವಕಿ ಎಂದು ಪರಿಚಯ ಮಾಡಿಕೊಂಡಿದ್ದ ಶ್ವೇತಾಗೌಡ, ಗೋಲ್ಡ್ ಬಿಜಿನೆಸ್ ಕೇಸಿನಲ್ಲಿ ವರ್ತೂರು ಪ್ರಕಾಶ್ ಹೆಸರು ಹೇಳಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಪರಿಚಯವಾಗಿದ್ದ ಶ್ವೇತಾ, ಒಡವೆ ಖರೀದಿ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ ಎಂದು ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ. ಪೊಲೀಸರಿಂದ ಮಾಹಿತಿ ಬಂದ ಬಳಿಕವಷ್ಟೇ ಈ ವಿಚಾರ ತಿಳಿದುಬಂದಿದೆ ಎಂದು ಪ್ರಕಾಶ್ ಹೇಳಿದ್ದಾರೆ.
ಬೆಂಗಳೂರು (ಡಿ.22): ಶ್ವೇತಾಗೌಡ ಬಂಧನದ ಬಗ್ಗೆ ನನಗೆ ನಿನ್ನೆಯೇ ಪೊಲೀಸ್ ಠಾಣೆಯಿಂದ ಮಾಹಿತಿ ಬಂದಿದೆ. ಶ್ವೇತಾ ನನಗೆ ಪರಿಚಯ ಆಗಿದ್ದೇ ಕಳೆದ ನಾಲ್ಕು ತಿಂಗಳ ಹಿಂದೆ. ಸಮಾಜ ಸೇವಕಿ ಎಂದು ಪರಿಚಯ ಮಾಡಿಕೊಂಡಿದ್ದು, ಇದೀಗ ಗೋಲ್ಡ್ ಬಿಜಿನೆಸ್ ಕೇಸಿನಲ್ಲಿ ನನ್ನ ಹೆಸರು ಹೇಳಿದ್ದಾಳೆ ಎಂದು ಸ್ವತಃ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವರ್ತೂರ್ ಪ್ರಕಾಶ್ ಅವರು, ನನಗೆ ನಿನ್ನೆ ಸ್ಟೇಷನ್ ನಿಂದ ಮಾಹಿತಿ ಬಂತು. ಮೂರು ನಾಲ್ಕು ತಿಂಗಳ ಮುಂಚೆ ನಮ್ಮ ಮನೆಗೆ ಬಂದಿದ್ದರು. ಸಮಾಜಸೇವಕಿ ಅಂತ ಪರಿಚಯ ಮಾಡಿಕೊಂಡರು. ಆಕೆಯೂ ನನಗೆ ತಿಳಿಸಿ ಒಡವೆ ಖರೀದಿಸಿಲ್ಲ. ಜ್ಯುವೆಲ್ಲರಿ ಮಾಲೀಕರು ನನಗೆ ತಿಳಿಸಿಲ್ಲ. ದೂರು ನೀಡಿರುವ ವಿಚಾರ ಒಡವೆ ಅಂಗಡಿಯವರು ತಿಳಿಸಿದ್ದಾರೆ. ಆಕೆಯ ಬಿಜಿನೆಸ್ ಬಂಗಾರದ ಬಗ್ಗೆ ನನ್ನ ಬಳಿ ಪ್ರಸ್ತಾಪ ಮಾಡಿಯೇ ಇಲ್ಲ ಎಂದು ಹೇಳಿದರು.
ಇನ್ನು ಈ ವಿಚಾರ ನನಗೂ ನಿನ್ನೆಯೇ ಗೊತ್ತಾಗಿದ್ದು. ಮನೆ ಹತ್ತಿರ ಜನ ಬಂದ ಹಾಗೇ ಆಕೆ ಕೂಡ ಬಂದಿದ್ದಾಳೆ ಅಷ್ಟೇ. ನನಗೆ ಪೊಲೀಸರು ಪೋನಿನಲ್ಲಿ ಹೇಳಿದ್ದಾರೆ. ನಾನು ಸೋಮವಾರ ವಿಚಾರಣೆಗೆ ಹೋಗುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು.