ಪ್ರಾಂಕ್‌ ಕಾಲ್‌ ಮಾಡಿ ರ್ಯಾಪಿಡೋ ಚಾಲಕನನ್ನು ಕರೆಸಿ, ಥಳಿಸಲು ಮುಂದಾದ ಆಟೋ ಚಾಲಕರು

ಸರ್ಕಾರದ ವಿರುದ್ಧ ಬೆಂಗಳೂರು ಬಂದ್‌ಗೆ ಕರೆಕೊಟ್ಟಿದ್ದ ಆಟೋ ಚಾಲಕರು, ಪ್ರಾಂಕ್‌ ಕಾಲ್‌ ಮಾಡಿ ರ್ಯಾಪಿಡೋ ಬೈಕ್‌ ಚಾಲಕನನ್ನು ಕರೆಸಿಕೊಂಡು ಥಳಿಸಲು ಮುಂದಾದ ಘಟನೆ ನಡೆದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.11): ಬೆಂಗಳೂರು ಬಂದ್‌ಗೆ ಕರೆಕೊಟ್ಟ ಆಟೋ ಚಾಲಕರು, ಪ್ರತಿಭಟನೆ ವೇಳೆ ಹಲವು ಗೂಂಡಾಗಿರಿ ಹಾಗೂ ವಿಕೃತಿಗಳನ್ನು ಮೆರೆದಿರುವ ಘಟನೆಗಳು ನಡೆದಿವೆ. ಅದರಲ್ಲಿಯೂ ಹೊಟ್ಟೆಪಾಡಿಗಾಗಿ ರ್ಯಾಪಿಡೋ ಬೈಕ್‌ ಚಾಲನೆ ಮಾಡುತ್ತಿದ್ದ ಬೈಕ್‌ ಚಾಲಕನನ್ನು ಸುಳ್ಳು ಕರೆ (ಪ್ರಾಂಕ್‌ ಕಾಲ್‌) ಮಾಡಿ ಪ್ರತಿಭಟನಾನಿರತ ಆಟೋ ಚಾಲಕರು, ಆತನನ್ನು ಮನಸೋ ಇಚ್ಛೆ ಥಳಿಸಲು ಮುಂದಾಗಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಆಟೋ ಚಾಲಕರು ಸೇರಿಕೊಂಡು ಬಾಯಿಗೆ ಬಂದಂತೆ ಬೈಯುತ್ತಾ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಪೊಲೀಸರು ರ್ಯಾಪಿಡ್‌ ಚಾಲಕನನ್ನು ಬಿಡಿಸಿ ಅಲ್ಲಿಂದ ಕಳುಹಿಸಿದ್ದಾರೆ. ಆದರೆ, ಫ್ರಾಂಕ್‌ ಕಾಲ್‌ ಮಾಡಿ ರ್ಯಾಪಿಡೋ ಬೈಕ್‌ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿರುವುದು ಮಾತ್ರ ಅಮಾನವೀಯ ಘಟನೆಯಾಗಿದೆ. 

Related Video