
42 ಕೊರೋನಾ ಕೇಸ್ ಆದ್ರೂ ಬುದ್ದಿ ಕಲಿಯದ ಬೆಳಗಾವಿ ಜಿಲ್ಲಾಡಳಿತ: ಸಾಮಾಜಿಕ ಅಂತರ ಉಲ್ಲಂಘಣೆ..!
ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ಕಂಗಾಲಾದ ಬೆಳಗಾವಿ ಜನತೆ|ಒಂದೇ ವಾಹನದಲ್ಲಿ ಕ್ವಾರಂಟೈನ್ ವ್ಯಕ್ತಿಗಳನ್ನ ಶಿಫ್ಟ್ ಮಾಡಿದ ಜಿಲ್ಲಾಡಳಿತ| ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜಿಲ್ಲಾಡಳಿತ|
ಬೆಳಗಾವಿ(ಏ.19): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದ ಜನರು ಅಕ್ಷರಶಹಃ ಕಂಗಾಲಾಗಿ ಹೋಗಿದ್ದಾರೆ. ಏತನ್ಮಧ್ಯೆ ಒಂದೇ ವಾಹನದಲ್ಲಿ ಕ್ವಾರಂಟೈನ್ ವ್ಯಕ್ತಿಗಳನ್ನ ಶಿಫ್ಟ್ ಮಾಡುವ ಮೂಲಕ ಜಿಲ್ಲಾಡಳಿತ ಯಡವಟ್ಟು ಮಾಡಿಕೊಂಡಿದೆ.
ಲಾಕ್‌ಡೌನ್ ಕಟ್ಟುನಿಟ್ಟಾಗಿದ್ದರೂ ಸೋಂಕಿತರ ಸಂಖ್ಯೆ ಮಾತ್ರ ಇಳಿದಿಲ್ಲ!
ಕ್ವಾರಂಟೈನ್ ವ್ಯಕ್ತಿಗಳನ್ನ ಸಾಮೂಹಿಕವಾಗಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಹೊರವಲಯದ ಹೋಟೆಲ್‌ವೊಂದಕ್ಕೆ ಶಿಫ್ಟ್ ಮಾಡಲಾಗಿದೆ. ಈ ಎಲ್ಲ ದೃಶ್ಯಾವಳಿಗಳು ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಒಂದ್ಕಡೆ ಜಿಲ್ಲಾಡಳಿತವೇ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಹೇಳಿ ಇದೀಗಾ ತಾನೇ ಈ ಆದೇಶವನ್ನ ಉಲ್ಲಂಘಿಸಿದೆ.