ಬೆಳಗಾವಿ: ಸಾರಾಯಿ ತರಲು ನದಿಗೆ ಹಾರಿದ ಭೂಪ, ಕುಡುಕನ ಹುಚ್ಚಾಟಕ್ಕೆ ಗ್ರಾಮಸ್ಥರು ಸುಸ್ತೋ ಸುಸ್ತು..!

ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಕುಡುಕನ ಹುಚ್ಚಾಟ| ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದ ಘಟನೆ| ಬೆಳಗಾವಿಯ ಢವಳೇಶ್ವರದಿಂದ ಬಾಗಲಕೋಟೆಯ ಢವಳೇಶ್ವರಕ್ಕೆ ಸಾರಾಯಿ ತರಲು ಹೋಗಿದ್ದ ಕುಡುಕ|
 

Share this Video
  • FB
  • Linkdin
  • Whatsapp

ಬೆಳಗಾವಿ(ಸೆ.27): ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಕುಡುಕನೊಬ್ಬ ಹುಚ್ಚಾಟ ಮೆರೆದ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ. ಹಾಲಪ್ಪ ಎಂಬುವನೇ ಈ ರೀತಿಯಾಗಿ ಹುಚ್ಚಾಟ ಮಾಡಿದ ವ್ಯಕ್ತಿಯಾಗಿದ್ದಾನೆ. 

ಉತ್ತರ ಕರ್ನಾಟಕಕ್ಕೆ ಮತ್ತೆ ವರುಣಾಘಾತ: ಸಂಕಷ್ಟದಲ್ಲಿ ಜನತೆ

ಹಾಲಪ್ಪ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಢವಳೇಶ್ವರ ಗ್ರಾಮಕ್ಕೆ ಸಾರಾರಿ ತರಲೆಂದು ನದಿ ಹಾರಿದ್ದಾನೆ. ಹಾಲಪ್ಪ ಕುಡಿದ ಮತ್ತಿನಲ್ಲಿಯೇ‌ ನದಿ ಹಾರಿ ಈಜಿ ದಡ ಸೇರಿದ್ದಾನೆ. ಕುಡುಕನ ಹುಚ್ಚಾಟ ಕಂಡು ಢವಳೇಶ್ವರ ಗ್ರಾಮಸ್ಥರು ಸುಸ್ತಾಗಿದ್ದಾರೆ. ಅದೃಷ್ಟವಶಾತ್ ಹಾಲಪ್ಪನಿಗೆ ಪ್ರಾಣಾಪಾಯ ಉಂಟಾಗಿಲ್ಲ. 

Related Video