Video:21 ದಿನಗಳ ಬಳಿಕ ಕೊನೆಗೂ ಮಗಳನ್ನ ಅಪ್ಪಿ ಮುದ್ದಾಡಿದ ಬೆಳಗಾವಿಯ ನರ್ಸ್..!

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಕಳೆದ 20 ದಿನಗಳಿಂದ ಮಗಳ ಮುಖ ನೋಡದೇ ಸಂಕಟಪಡುತ್ತಿದ್ದ ಬೆಳಗಾವಿಯ ನರ್ಸ್​ ಸುಗಂಧ ಕೊನೆಗೂ ತಮ್ಮ ಮನೆಗೆ ಹೋಗಿ ಮಗಳನ್ನ ಅಪ್ಪಿ ಮುದ್ದಾಡಿದ್ದಾರೆ.

Share this Video
  • FB
  • Linkdin
  • Whatsapp

ಬೆಳಗಾವಿ, (ಏ.18): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಕಳೆದ 20 ದಿನಗಳಿಂದ ಮಗಳ ಮುಖ ನೋಡದೇ ಸಂಕಟಪಡುತ್ತಿದ್ದ ಬೆಳಗಾವಿಯ ನರ್ಸ್​ ಸುಗಂಧ ಕೊನೆಗೂ ತಮ್ಮ ಮನೆಗೆ ಹೋಗಿ ಮಗಳನ್ನ ಅಪ್ಪಿ ಮುದ್ದಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಿ, ಹೋಟೆಲ್ ಕ್ವಾರಂಟೈನ್​​​ನಲ್ಲಿದ್ದ ಸುಗಂಧ 15 ದಿನಗಳಾದ್ರೂ ಮನೆಗೆ ಹೋಗಲು ಆಗಿರಲಿಲ್ಲ. ಅಮ್ಮನನ್ನು ಕಾಣದೆ ಸುಗಂಧ ಅವರ ಮಗಳು ಅಳುತ್ತಾ ಆಸ್ಪತ್ರೆಗೆ ಬಂದಿದ್ದಳು. ಆದ್ರೆ ತನ್ನ ಕರುಳ ಕುಡಿಯನ್ನದೂರದಿಂದಲೇ ನೋಡಿ ಕಣ್ಣೀರಿಟ್ಟಿದ್ದರು. 

ಈ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಖುದ್ದು ಸುಗಂಧ ಕುಟುಂಬಕ್ಕೆ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದೀಗ ನರ್ಸ್ ಸುಂಗಧಳ ಕ್ವಾರೆಂಟೈನ್ ಮುಗಿದಿದ್ದು, ಮನೆ ಬಂದಿದ್ದಾರೆ. ಇನ್ನೇನು ಮನೆಯೊಳಗೆ ಬರಬೇಕೆನ್ನುವಷ್ಟರಲ್ಲೇ ದೂರದಿಂದ ತಾಯಿಯನ್ನು ನೋಡಿ ಮಗಳು ಓಡಿ ಹೋಗಿ ತಾಯಿನ್ನು ಅಪ್ಪಿಕೊಂಡಿದ್ದಾಳೆ.

Related Video