
ಮಂಗಳೂರು: ಸರಣಿ ಅಪಮೃತ್ಯುಗಳ ಹಿಂದಿದ್ಯಾ ತುಳುನಾಡಿನ ಕಾರ್ಣಿಕ ದೈವದ ಮುನಿಸು?
ಕುಂಪಲದ ಕೇಸರಿ ಮಿತ್ರ ವೃಂದ ಸಂಘಟನೆಯಿಂದ ಇಂದು ಮಹಾಮೃತ್ಯುಂಜಯ ಯಾಗ ನಡೆಯಲಿದೆ. ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ದೇವರ ಪುಣ್ಯದ ಮಣ್ಣಿನಲ್ಲಿ ಮಹಾಮೃತ್ಯುಂಜಯ ಯಾಗ ನಡೆಯಲಿದೆ. 2019ರಿಂದ 2024ರ ವರೆಗೆ ಕುಂಪಲದಲ್ಲಿ ಐವತ್ತಕ್ಕೂ ಹೆಚ್ಚು ಅಕಾಲಿಕ ಮರಣಗಳು ಸಂಭವಿಸಿದೆ. ಪ್ರಶ್ನಾ ಚಿಂತನೆಯಲ್ಲಿ ಹಲವಾರು ವರ್ಷಗಳ ಹಿಂದಿನ ದೈವ ಸಾನಿಧ್ಯದ ಸುಳಿವು ನೀಡಿದ್ದರು.
ಮಂಗಳೂರು(ಜ.28): ಮಹಾಮೃತ್ಯುಂಜಯ ಯಾಗದ ಮೂಲದ ಸಾವು-ನೋವು ತಡೆಗೆ ಗ್ರಾಮಸ್ಥರು ಹೆಜ್ಜೆ ಇಟ್ಟಿದ್ದಾರೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಗ್ರಾಮದ ಕಳೆದ ಐದು ವರ್ಷಗಳಲ್ಲಿ ಸರಣಿ ಸಾವುಗಳು ಸಂಭವಿಸಿವೆ. ಪ್ರಶ್ನಾ ಚಿಂತನೆಯಲ್ಲಿ ಕುಂಪಲದ ಕಾರ್ಣಿಕ ದೈವದ ಮುನಿಸಿನ ಬಗ್ಗೆ ಚರ್ಚೆಯಾಗಿದೆ. ಸದ್ಯ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಸಾವು-ನೋವು ತಡೆಗೆ ಕುಂಪದಲ್ಲಿ ಮಹಾಮೃತ್ಯುಂಜಯ ಯಾಗ ನಡೆಸಲು ನಿರ್ಧರಿಸಲಾಗಿದೆ.
ಕುಂಪಲದ ಕೇಸರಿ ಮಿತ್ರ ವೃಂದ ಸಂಘಟನೆಯಿಂದ ಇಂದು ಮಹಾಮೃತ್ಯುಂಜಯ ಯಾಗ ನಡೆಯಲಿದೆ. ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ದೇವರ ಪುಣ್ಯದ ಮಣ್ಣಿನಲ್ಲಿ ಮಹಾಮೃತ್ಯುಂಜಯ ಯಾಗ ನಡೆಯಲಿದೆ. 2019ರಿಂದ 2024ರ ವರೆಗೆ ಕುಂಪಲದಲ್ಲಿ ಐವತ್ತಕ್ಕೂ ಹೆಚ್ಚು ಅಕಾಲಿಕ ಮರಣಗಳು ಸಂಭವಿಸಿದೆ. ಪ್ರಶ್ನಾ ಚಿಂತನೆಯಲ್ಲಿ ಹಲವಾರು ವರ್ಷಗಳ ಹಿಂದಿನ ದೈವ ಸಾನಿಧ್ಯದ ಸುಳಿವು ನೀಡಿದ್ದರು. ಅಕಾಲಿಕ ಮರಣಗಳ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ದೈವ ಮುನಿಸಿನ ಸುಳಿವು ಸಿಕ್ಕಿತ್ತು. ಕುಂಪಲದ ಪೂರ್ವ ದಿಕ್ಕಿನಲ್ಲಿ ದೈವ ಸಾನಿಧ್ಯವೊಂದಿದ್ದು, ದೈವಕ್ಕೆ ಕಾಲಾದಿ ಸೇವೆಗಳು ಸಲ್ಲಿಕೆಯಾಗುತ್ತಿದ್ದ ಮಾಹಿತಿ ಲಭ್ಯವಾಗಿದೆ. ಆದರೆ ಯಾವುದೋ ಕಾರಣಕ್ಕೆ ಅದು ನಿಂತು ಹೋಗಿದ್ದು, ಸದ್ಯ ಆ ಸಾನಿಧ್ಯದ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಸುಳಿವು ಸಿಕ್ಕಿತ್ತು. ದೈವ ಸಾನಿಧ್ಯ ಪತ್ತೆಗೂ ಮೊದಲು ಗ್ರಾಮದ ಒಳಿತಿಗೆ, ಸಾವುಗಳನ್ನು ತಡೆಗಟ್ಟಲು ಮಹಾಮೃತ್ಯುಂಜಯ ಯಾಗ ನಡೆಸಲು ತೀರ್ಮಾನಿಸಲಾಗಿದೆ.
Kotekar Bank Robbery in Mangaluru: ರಾಜ್ಯ ಬೆಚ್ಚಿಬೀಳಿಸಿದ್ದ ದರೋಡೆ ಕೇಸ್ ಬೇಧಿಸಿದ ಪೊಲೀಸರು | Suvarna News
ಕುಂಪದಲ್ಲಿ ಕಳೆದ ಐದು ವರ್ಷಗಳಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ಭಾರೀ ಆತಂಕ ಸೃಷ್ಟಿಯಾಗಿದೆ. ಆತ್ಮಹತ್ಯೆ ಪ್ರಕರಣಗಳ ಜೊತೆಗೆ ಅಪಘಾತ ಹಾಗೂ ದಿಢೀರ್ ಅನಾರೋಗ್ಯದ ಸಾವುಗಳೇ ಹೆಚ್ಚು ಸಂಭವಿಸಿವೆ. ದೈವದ ಅಸಾಮಧಾನದ ಕಾರಣಕ್ಕೆ ಕುಂಪಲದಲ್ಲಿ ಅಕಾಲಿಕ ಸಾವುಗಳಾಗುತ್ತಿರೋ ಆತಂಕ ಎದುರಾಗಿದೆ. ಸಣ್ಣ ವಯಸ್ಸಿನ ಯುವಕ-ಯುವತಿಯರ ಆತ್ಮಹತ್ಯೆಗಳೇ ಹೆಚ್ಚು ಸಂಭವಿಸಿವೆ. ಸರಣಿ ಸಾವು ತಡೆಗೆ ಮಹಾಮೃತ್ಯುಂಜಯ ಯಾಗಕ್ಕೆ ಗ್ರಾಮದ ಯುವ ಸಂಘಟನೆ ಮುಂದಾಗಿದೆ. ಪ್ರಶ್ನೆ ಚಿಂತನೆಯಲ್ಲಿ ಸರಣಿ ಸಾವುಗಳ ಆಪತ್ತಿನ ಬಗ್ಗೆ ಉಲ್ಲೇಖಿಸಲಾಗಿದೆ.